ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಣ್ಣಿನಲ್ಲಿ ಸಿಲುಕಿದ ಸ್ಕೂಲ್ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

School-Bus--01

ಕೆಜಿಎಫ್, ಆ.11- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲಾ ಬಸ್ ಮಣ್ಣಿನಲ್ಲಿ ಸಿಲುಕಿದ ಘಟನೆ ನಗರದಲ್ಲಿ ನಡೆದಿದೆ. ಚಾಂಪಿಯನ್‍ರೀಫ್ಸ್‍ನ ವಿಲಿಯಂ ರಿಚರ್ಡ್ ಶಾಲೆಯ ಬಸ್ ಎಂದಿನಂತೆ ಪೈಪ್‍ಲೈನ್ ಮಾರ್ಗವಾಗಿ ಬಂದಾಗ, ಅದು ರಸ್ತೆ ಮಧ್ಯದಲ್ಲಿಯೇ ಸಿಕ್ಕಿ ಹಾಕಿಕೊಂಡಿತು. ಬಸ್ ಮುಂಭಾಗ ಸಂಪೂರ್ಣವಾಗಿ ಎರಡು ಅಡಿ ಕೆಳಗೆ ಹೋಗಿ, ಬಸ್ ಮುಂದಕ್ಕೆ ಚಲಿಸದಂತೆ ಆಯಿತು. ಈ ಸಂದರ್ಭದಲ್ಲಿ ಬಸ್‍ನಲ್ಲಿದ್ದ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಯಭೀತರಾಗಿ ಕೂಗಿಕೊಂಡರು. ಕೂಡಲೇ ಅಕ್ಕಪಕ್ಕದ ಜನರು ಓಡಿಬಂದು ಶಾಲಾ ವಿದ್ಯಾರ್ಥಿಗಳನ್ನು ಬಸ್‍ನಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದರು. ನಗರದಲ್ಲಿ ಮಂಡಳಿಯು ಒಳಚರಂಡಿ ಕಾಮಗಾರಿಯನ್ನು ನಡೆಸುತ್ತಿದೆ. ಇದು ಸಾರ್ವಜನಿಕ ಟೀಕೆಗೆ ಒಳಗಾಗಿದೆ. ಕಾಮಗಾರಿಗಳನ್ನು ಅರ್ಧಂಬರ್ಧ ಮಾಡಿ ಜನರನ್ನು ತೊಂದರೆಗೆ ಮಂಡಳಿ ಸಿಲುಕಿಸುತ್ತಿದೆ.

ಈ ಸಂಬಂಧವಾಗಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಇದರಿಂದಾಗಿ ಎಚ್ಚೆತ್ತ ಜಲಮಂಡಳಿ ಅಧಿಕಾರಿಗಳು ನೆಪಮಾತ್ರಕ್ಕೆ ತೋಡಿದ್ದ ಹಳ್ಳಕ್ಕೆ ಮಣ್ಣು ತುಂಬಿ ಸುಮ್ಮನಾಗಿದ್ದರು. ಮಳೆ ಬಂದಿದ್ದರಿಂದ ಸದರಿ ಹಳ್ಳ ಟೊಳ್ಳಾಗಿದ್ದು, ಬಸ್ ರಸ್ತೆ ಮಧ್ಯದಲ್ಲಿಯೇ ಸಿಕ್ಕಿ ಹಾಕಿಕೊಳ್ಳಬೇಕಾದ ಪ್ರಸಂಗ ನಡೆಯಿತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin