ಅನುಭವದಲ್ಲಿ ಅಮೃತವಿದೆ – ಚಕ್ರವರ್ತಿ ದಾನೇಶ್ವರ ಶ್ರೀಗಳು

ಈ ಸುದ್ದಿಯನ್ನು ಶೇರ್ ಮಾಡಿ

20

ಬಂಡಿಗಣಿ,ಫೆ.14- ಕಲ್ಯಾಣದಲ್ಲಿ ಅನುಭವ ನಡೆಯುತ್ತಿತ್ತು. ಸಾಕಷ್ಟು ಜನರು ಶರಣರಾದರು. ಅನುಭವ ಹೇಳಿ ಅನುಭವ ಕೇಳುವುದರಿಂದ ದೇವಾದಿಗಳಾಗುತ್ತಾರೆ. ಅಂದಿನ ಶರಣರು ಇಂದುಂಟ್ಟು ಮುಂದುಂಟ್ಟು ಈ ಮಾತು ಸತ್ಯ. ಅನುಭವದಲ್ಲಿ ಅಮೃತವಿದೆ. ಎಲ್ಲ ಧರ್ಮದ ಕಾರ್ಯವನ್ನು ತಿಳಿದು ಸಾಧು ಸತ್ಪುರುಷರಿಂದ ಅನುಭವವನ್ನು ಪಡೆದು ತನ್ನನು ತಾನು ಅರಿಯಬೇಕು ಎಂದು ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.ಬಂಡಿಗಣಿ ಮಠದಲ್ಲಿ ಪ್ರತಿ ಸೋಮವಾರದಂತೆ ಅನುಭವ ಹೇಳಿ ಅನುಭವ ಕೇಳಿ ಕಾರ್ಯಕ್ರಮದ ಸಾನಿದ್ಯ ವಹಿಸಿ ಅವರು ಮಾತನಾಡಿ ಸ್ವಾಮಿಗಳಾದವರು ಸಮಾಜವನ್ನು ತಿದ್ದುವ ಕೆಲಸ ಮಾಡುವುದನ್ನು ಬಿಟ್ಟು ಹಣದ ಬೆನ್ನು ಹತ್ತಿ ಪುರಾಣ, ಕಿರ್ತನೆ ಹೇಳಲು ಹಣವನ್ನು ತೆಗೆದುಕೊಳಬಾರದು. ಸ್ವಾಮಿಗಳು ಜಾತಿಗೊಬ್ಬರು ಸ್ವಾಮೀಗಳಾಗದೆ ಜಾತಿಯನ್ನು ತೆಗೆದು ಹಾಕಿ ಎಲ್ಲರು ಒಂದೇ ಎಂಬ ಭಾವನೆಯನ್ನು ಹೊಂದಿರುವವರಾಗಬೇಕು, ನೂರು ಕುಲಗಳು ಏಕ ಆದಾಗ ದೇಶ ರಾಮರಾಜ್ಯವಾಗುತ್ತದೆ. ಮಠಮಾನ್ಯಗಳಲ್ಲಿ ಸದಾ ದಾಸೋಹ, ಧರ್ಮದಂತಹ ಕಾರ್ಯಗಳು ನಡೆಯಬೇಕು. ಎಲ್ಲರೂ ಸಂಸಾರಕ್ಕೆ ಶರಣಾಗದೆ ಸಮಾಜಕ್ಕಾಗಿ ಶರಣಾಗಬೇಕು.

ಲೋಕ ಕಲ್ಯಾಣಕ್ಕಾಗಿ ತನು, ಮನ, ಧನದಿಂದ ಸಹಾಯ ಹಸ್ತವನ್ನು ಮಾಡಬೇಕು. ಜಾತಿಯನ್ನು ಬಿಟ್ಟು ದೇಶವನ್ನು ರಾಮರಾಜ್ಯವನ್ನಾಗಿ ಮಾಡಲು ಎಲ್ಲರೂ ಮುಂದೆ ಬರಬೇಕು ಎಂದರು. ಚಿಕ್ಕಲಕಿ ಕ್ರಾಸನ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಮಾನವ ಜನ್ಮ ಶ್ರೇಷ್ಟ ಜನ್ಮ. ಎಲ್ಲರು ತಮ್ಮ ಜೀವನದಲ್ಲಿ ಒಳೆಯ ಸಂಸ್ಕಾರಗಳನ್ನು ಬಳಸಿಕೊಳಬೇಕು. ಗುರುವಿನ ಮಾತನ್ನು ಆಲಿಸಿ ನಾಮಸ್ಮರಣೆ ಮಾಡಬೇಕು. ಆಸ್ತಿ ಸ್ತಿರವಾದದಲ್ಲ ಆಸ್ತಿ ಮಾಡದೆ ನಾಲ್ಕಾರು ಜನರಿಗೆ ಧಾನ ದರ್ಮದಿಂದ ನಡೆಯಬೇಕು, ದೇವರನ್ನು ಕಾಣಲು ದಾನೇಶ್ವರ ಶ್ರೀಗಳಂತಹ ಮಾರ್ಗದರ್ಶನದಲ್ಲಿ ನಡೆದರೆ ಅದು ಸಾಧ್ಯ. ದಾನೇಶ್ವರರು ನಡೆದಾಡುವ ದೇವರು ಹಾಗೂ ಪವಾಡ ಪುರುಷರು ಭಕ್ತರಿಗೆ ಒಳ್ಳೆಯ ನೀತಿ ಭಕ್ತಿ ಮಾರ್ಗವನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು.ವೇದಿಕೆಯಲ್ಲಿ ರುದ್ರಮುನಿ ಶ್ರೀಗಳು, ನಿವೃತ ಶಿಕ್ಷಕ ಎನ್. ಕಾಡದೇವರ್, ಸುಮಂಗಲಾತಾಯಿ ಪಾಟೀಲ, ಯಲ್ಲಪ್ಪ ಇಳಿಗೇರ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin