ಅಲ್ಪಸಂಖ್ಯಾತರಿಗೆ ಒಂದು ನ್ಯಾಯ, ಹಿಂದೂಗಳಿಗೆ ಒಂದು ನ್ಯಾಯ ಏಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01

ಉಡುಪಿ,ಫೆ.21–ಎಲ್ಲಾ ಧರ್ಮಗಳನ್ನು ಒಂದೇ ರೀತಿಯಾಗಿ ನೋಡಬೇಕು, ಅಲ್ಪಸಂಖ್ಯಾತರಿಗೆ ಒಂದು ನ್ಯಾಯ, ಹಿಂದೂಗಳಿಗೆ ಒಂದು ನ್ಯಾಯ ಯಾಕೆ? ಸವಲತ್ತು ಎಲ್ಲರಿಗೂ ಸಿಗಬೇಕು ಎಂಬ ಬೇಡಿಕೆ ಉಡುಪಿಯಲ್ಲಿ ನಡೆದ ಸಂತರ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾಗಿದೆ. ಸಂತರ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಾಲ್ಗೊಂಡಿದ್ದರು. ಈ ವೇಳೆ ರಾಜ್ಯದ ಕೆಲ ಕಾನೂನು ವಿಚಾರಗಳು ಪ್ರಸ್ತಾಪವಾಗಿವೆ.

ಸಭೆ ಬಳಿಕ ಮಾತನಾಡಿದ ಪೇಜಾವರ ಶ್ರೀಗಳು, ಕಾನೂನಿನ ವಿಚಾರದಲ್ಲಿ ಪಕ್ಷಪಾತ ಮಾಡಬಾರದು ಎಂಬುದು ನಮ್ಮ ಅಭಿಪ್ರಾಯ. ಮಹದಾಯಿ ವಿಚಾರದಲ್ಲಿ ರೈತರಿಗೆ ಸಹಾಯ ಮಾಡಬೇಕು. ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಸಹಕರಿಸದಿದ್ದರೆ ಅದು ಅವರ ಸಮಸ್ಯೆ, ಕೇಂದ್ರ ಸರ್ಕಾರ ಕೈಲಾದ ಸಹಾಯ ಮಾಡಿ ಎಂದು ಶ್ರೀಗಳು ಒತ್ತಾಯಿಸಿದ್ದಾರೆ.

ಸಭೆಯಲ್ಲಿ 20 ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಿದ್ದರು. ವಿಶ್ವಪ್ರಸನ್ನ ತೀರ್ಥ ಶ್ರೀ, ಪುತ್ತಿಗೆ ಸುಗುಣೇಂದ್ರ ಮಠಾಧೀಶರು, ಪಾಲಿಮಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ, ವಜ್ರಾದೇಹಿ ಸ್ವಾಮೀಜಿ, ನರಸಿಂಹಾಶ್ರಮಶ್ರೀ, ಕೇಮಾರುಶ್ರೀ, ರಾಘವೇಶ್ವರ ಸ್ವಾಮೀಜಿ, ಮರಕಡ ಸ್ವಾಮೀಜಿ, ಶ್ರೀ ಕಾರಿಂಜ ಸ್ವಾಮೀಜಿ ಭಾಗಿಯಾಗಿದ್ದು, ಈ ಎಲ್ಲಾ ಮಠಾಧೀಶರಿಗೆ ಅಮಿತ್ ಶಾ, ಬಿಎಸ್ ವೈ ಶಾಲು ಹೊದಿಸಿ ಸನ್ಮಾನಿಸಿ ಗೌರವ ಸಲ್ಲಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin