ಆಧಾರ್ ಮಾಹಿತಿ ಸೋರಿಕೆಯಾಗದಂತೆ ನಿಗಾ ವಹಿಸುವಂತೆ ಖಡಕ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Aadhar

ನವದೆಹಲಿ, ಏ.7- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆಧಾರ್ ಕಾರ್ಡ್ ಮಾಹಿತಿಯು ಇತ್ತೀಚೆಗೆ ಸೋರಿಕೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಇಂತಹ ಪ್ರಕರಣಗಳು ಪುನರಾವರ್ತನೆಯಾಗಬಾರದು ಎಂದು ಭಾರತ ಗುರುತಿನ ಚೀಟಿ ಪ್ರಾಧಿಕಾರದ ಸಿಇಒ ಅಜಯ್ ಭೂಷಣ್ ಪಾಂಡೆ ಎರ್ನಾಲ್‍ಮೆಂಟ್ ಏಜೆನ್ಸಿಯ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ವೈಯಕ್ತಿಕ ಮಾಹಿತಿಗಳು ಬೇರೆಯವರ ಕೈ ಸೇರಬಾರದು. ಕೆಲವು ತಾಂತ್ರಿಕ ದೋಷದಿಂದ ಇಂತಹ ಪ್ರಕರಣಗಳು ನಡೆಯುತ್ತವೆ. ಮುಖ್ಯ ಮಾಹಿತಿಗಳನ್ನು ಯಾರಿಗೂ ಸಿಗದಂತೆ ಬೇರೆ ಸ್ಥಳದಲ್ಲಿ ಇಡಬೇಕು. ಇದರ ಬಗ್ಗೆ ನಿಗಾ ವಹಿಸುವುದು ಆಪರೇಟರ್ ಮತ್ತು ಏಜೆನ್ಸಿಯವರ ಕರ್ತವ್ಯ. ಧೋನಿಯವರ ಮಾಹಿತಿ ಸೋರಿಕೆ ಮಾಡಿದವರ ವಿರುದ್ಧ ಕೃಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಲಸದ ಅವಧಿಯಲ್ಲಿ ಜನರು ತೆರಳಿ ಆಧಾರ್ ಗುರುತಿನ ಚೀಟಿ ಮಾಡಿಸಿಕೊಳ್ಳಿ. ಬೇರೆ ಸಮಯದಲ್ಲಿ ಕಚೇರಿಗಳಿಗೆ ತೆರಳಬೇಡಿ. ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸಿ ಗುರುತಿನ ಚೀಟಿ ಮಾಡಿಸಿಕೊಳ್ಳಿ. ದೇಶಾದ್ಯಂತ 113 ಕೋಟಿ ಜನರು ಗುರುತಿನ ಚೀಟಿ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin