ಆನೇಕಲ್ ಬಂದ್ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Anekal--01

ಆನೇಕಲ್, ಏ.21- ಎಸ್ಸಿ- ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಇಂದು ಜೈಭೀಮ್ ಐಕ್ಯತಾ ವೇದಿಕೆ ಕರೆಯಲಾಗಿದ್ದ ಆನೇಕಲ್ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಆನೇಕಲ್, ಅತ್ತಿಬೆಲೆ, ಸರ್ಜಾಪುರ ಭಾಗಗಳಲ್ಲಿ ಪ್ರತಿಭಟನಾಕಾರರು ಟೈರ್‍ಗಳಿಗೆ ಧಿಕ್ಕಾರ ಕೂಗಿದರು.
ಅಂಗಡಿ ಮುಗ್ಗಟ್ಟುಗಳನ್ನು ಮಾಲೀಕರು ಮುಚ್ಚಿ ಸ್ವಯಂಪ್ರೇರಿತವಾಗಿ ಬಂದ್‍ಗೆ ಸಹಕರಿಸಿದ್ದು ಕಂಡು ಬಂತು. ಕರ್ನಾಟಕ ಅತ್ತಿಬೆಲೆ ಗಡಿಭಾಗದಲ್ಲಿ ಸುಮಾರು 1 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯ 7ರಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ದಲಿತ ಪರ, ಕನ್ನಡ ಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಧುರೀಣರು ಪಕ್ಷಾತೀತಾವಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ದಲಿತ ಮುಖಂಡ ಎಂ.ಸಿ. ಹಳ್ಳಿ ವೇಣು ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ಅತ್ಯಾಚಾರ, ಕಗ್ಗೊಲೆಗಳು ನಡೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಎಲ್ಲರಿಗೂ ಸಮಾನ ಹಕ್ಕು ಗಳನ್ನು ಕೊಡ ಬೇಕಾದ ನ್ಯಾಯಾಲಯಗಳೇ ದಲಿತರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಉದಾಹಣೆಗೆ ಜಾತಿ ನಿಂದನೆ ಕಾಯ್ದೆಯನ್ನು ಸಡಿಲ ಗೊಳಿಸಿರುವುದು ಎಂದರು. ಬಿಜೆಪಿಯ ಕೆಲವು ದುರೀಣರು ಸಂವಿಧಾನ ವನ್ನು ತಿರುಚುವ ಮತ್ತು ಬದಲಾಯಿಸುವ ಕೆಲಸಕ್ಕೆ ಕೈ ಹಾಕಿರುವುದು ಖಂಡನೀಯ ವಾದದ್ದು ಇದು ಪ್ರಜಾ ಪ್ರಭುತ್ವದ ಕಗ್ಗೊಲೆಯಾಗಿದ್ದು ಕೂಡಲೇ ಸುಪ್ರೀಂಕೋರ್ಟ್ ಜಾತಿ ನಿಂದನೆಯನ್ನು ಕಾಯ್ದೆ ಯಥಾವತ್ತಾಗಿ ಮುಂದು ವರೆಸಬೇಕು ಜೊತೆಗೆ ದಲಿತರಿಗೆ ಸೂಕ್ತ ಭದ್ರತೆಯನ್ನು ನೀಡಬೇಕು ಇಲ್ಲವಾದಲ್ಲಿ ರಾಜ್ಯಾದಂತ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

ಹೆಚ್ಚುವರಿ ಪೊಲೀಸರು: ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ಸುಮಾರು 500 ಜನಕ್ಕೂ ಹೆಚ್ಚು ಪೊಲಿಸರು ಮತ್ತು ಅರಸೇನೆ ಪಡೆಯು ಬಂದೋಬಸ್ತ್‍ನಲ್ಲಿ ಭಾಗಿಯಾಗಿದ್ದರು. ದಲಿತ ಮುಖಂಡರಾದ ಮಂಜುನಾಥ್ ದೇವು, ಸರ್ಜಾಪುರ ಶ್ರೀನಿವಾಸ್, ಮುತ್ತಾನಲ್ಲೂರು ಮುನಿರಾಜು, ನಾರಾಯಣಸ್ವಾಮಿ, ರಾವಣ, ಆನಂದ ಚಕ್ರವರ್ತಿ, ಬೆಸ್ತಮಾನಹಳ್ಳಿ ಯಲ್ಲಪ್ಪ, ಪುರು ಷೋತ್ತಮ್, ಬೊಮ್ಮಸಂದ್ರ ಮರುಗೇಶ್, ಮಂಜುನಾಥ್ ಮತ್ತಿತರು ಹಾಜರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin