ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಈ ಸುದ್ದಿಯನ್ನು ಶೇರ್ ಮಾಡಿ

Murder--01
ಚೇಳೂರು, ಏ.6-ಆಸ್ತಿ ವಿಚಾರಕ್ಕಾಗಿ ತಂದೆಯನ್ನೇ ಮಗ ಕೊಲೆ ಮಾಡಿರುವ ದಾರುಣ ಘಟನೆ ಗುಬ್ಬಿ ತಾಲೂಕಿನ ತ್ಯಾಗಟೂರಿನ ತೋಟದ ಮನೆಯಲ್ಲಿ ನಡೆದಿದೆ.ಕೆಂಪತಿಮ್ಮಯ್ಯ (65) ಮಗನಿಂದ ಕೊಲೆಯಾದ ತಂದೆ. ಕೆಂಪತಿಮ್ಮಯ್ಯನಿಗೆ ಎರಡು ಎಕರೆ ಜಮೀನಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಆಸ್ತಿ ವಿಚಾರವಾಗಿ ಆಗಿಂದಾಗ್ಗೆ ಅಪ್ಪ-ಮಕ್ಕಳ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆಯೂ ಸಹ ಆಸ್ತಿ ವಿಚಾರಕ್ಕಾಗಿ ಜಗಳ ನಡೆದಿದ್ದು, ಮಗ ಮಂಜುನಾಥ್ ತಂದೆಗೆ ಮನಸೋ ಇಚ್ಛೆ ಥಳಿಸಿ ತೋಟಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಸ್ಥಳಕ್ಕೆ ಅಡಿಷನಲ್ ಡಿವೈಎಸ್‍ಪಿ ಆಶಾರಾಣಿ, ಸಿಪಿಐ ರಂಗಸ್ವಾಮಿ, ಚೇಳೂರು ಠಾಣೆ ಪಿಎಸ್‍ಐ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಂಜುನಾಥ್‍ನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin