ಆಸ್ತಿ ಆಸೆಗೆ ಐಸಿಯುನಲ್ಲಿದ್ದ ತಂದೆಯನ್ನು ಕೊಲ್ಲಲೆತ್ನಿಸಿದ ಮಗಳು..! (ವಿಡಿಯೋ)

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ ಆ.13 : ಆಸ್ತಿ ಆಸೆಗಾಗಿ ಐಸಿಯುನಲ್ಲಿದ್ದ ತಂದೆಯ ಉಸಿರಾಟದ ಪೈಪ್ ಅನ್ನು ವೈದ್ಯಳಾಗಿರುವ ಮಗಳೇ ಕಿತ್ತು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೆಲ್ನೋಟಕ್ಕೆ ಇದು ಸಹಜ ಸಾವಿನಂತೆ ಕಂಡು ಬಂದಿತ್ತು. ನಂತರ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದ ವಿಡಿಯೊವನ್ನು ಪರಿಶೀಲಿಸಿದಾಗ ವೈದ್ಯೆ ಮಗಳ ಈ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.   82 ವರ್ಷದ ವ್ಯಕ್ತಿ ಹೃದಯ ಸಂಬಂಧಿತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾಗಿದ್ದ ತಂದೆಯನ್ನು ನೋಡಲು ಮಗಳು ತನ್ನ ಎರಡು ಗಂಡು ಮಕ್ಕಆಸ್ತಿ ಆಸೆಗೆ ಐಸಿಯುನಲ್ಲಿದ್ದ ತಂದೆಯನ್ನು ಕೊಲ್ಲಲೆತ್ನಿಸಿದ ಮಗಳು..! (ವಿಡಿಯೋ)ಳೊಂದಿಗೆ ಬಂದಿದ್ದಳು. ಈ ವೇಳೆ ಆರೈಕೆ ನೀಡುತ್ತಿದ್ದ ನರ್ಸ್‍ಗಳ ಬಳಿ ತಂದೆಯೊಂದಿಗೆ ಸ್ವಲ್ಪ ಮಾತನಾಡಲಿದೆ ಎಂದು ಮನವಿ ಮಾಡಿಕೊಂಡಿದ್ದಾಳೆ. ನಂತರ ವೈದ್ಯರು ಜೋಡಿಸಿದ್ದ ಕೃತಕ ಆಮ್ಲಜನಕ ಪೈಪ್‍ನ್ನು ಕಿತ್ತು ಹಾಕಿದ್ದಾಳೆ.

ಇದಾದ ಮೇಲೆ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ತಂದೆಯ ಬಳಿ ಕದ್ದು ಮುಚ್ಚಿ ತಂದಿದ್ದ ಆಸ್ತಿ ಪತ್ರಕ್ಕೆ ಮಕ್ಕಳೊಂದಿಗೆ ಸೇರಿಕೊಂಡು ಹೆಬ್ಬೆಟ್ಟು ಹಾಕಿಸಿಕೊಂಡಿದ್ದಾಳೆ. ನಂತರ ಕಿತ್ತುಹಾಕಿದ್ದ ಅಮ್ಲಜನಕದ ಪೈಪ್‍ನನ್ನು ಮರು ಜೋಡಿಸಿದ್ದರು. ಈ ವೇಳೆಗಾಗಲೇ ಆಮ್ಲಜನಕ ಸಿಗದ ಕಾರಣ ಆಕೆಯ ತಂದೆ ಸಾವನ್ನಪ್ಪಿದ್ದರು.
ಈ ಸಾವಿನ ಬಗ್ಗೆ ಅನುಮಾನಗೊಂಡ ಆಸ್ಪತ್ರೆಯ ವೈದ್ಯ ಮತ್ತು ಮೃತ ವ್ಯಕ್ತಿಯ ಮಗ ಡಾ. ಎಂ. ಜಯಪ್ರಕಾಶ್ ಸಿಸಿ ಕ್ಯಾಮೆರಾದ ವಿಡಿಯೋವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಕ್ಕನ ಕೃತ್ಯ ಬಯಲಾಗಿದೆ. ನಂತರ ಇದನ್ನ ಪೊಲೀಸರಿಗೆ ನೀಡಿದ್ದಾರೆ.

Attempt To  Own Father  In ICU in Dr

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin