ಆಸ್ತಿ ಹಂಚಿಕೆ ವಿಚಾರವಾಗಿ ಜಗಳ : ತಂದೆಯನ್ನೇ ಮುಗಿಸಿದ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

KRPete--01

ಕೆ.ಆರ್.ಪೇಟೆ, ಜು.24- ಆಸ್ತಿ ಹಂಚಿಕೆ ವಿಚಾರವಾಗಿ ತಂದೆ ಮಗನ ನಡುವೆ ನಡೆದ ಜಗಳದಲ್ಲಿ ಮಗನ ಕೋಪಕ್ಕೆ ತಂದೆ ಬಲಿಯಾಗಿರುವ ಘಟನೆ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದಲ್ಲಿ ನಡೆದಿದೆ ಮಾದಾಪುರ ಗ್ರಾಮದ ಮರೀಗೌಡ ಅವರ ಮಗ ಬೊಮ್ಮೇಗೌಡ(54) ಎಂಬುವವರೇ ಮಗನಿಂದಲೇ ಹತ್ಯೆಯಾದ ನತದೃಷ್ಠ ತಂದೆ. ಇವರ ಎರಡನೇ ಮಗ ಮಂಜೇಗೌಡ(24) ಆರೋಪಿ.

ಘಟನೆಯ ವಿವರ:

ಮದಾಪುರ ಗ್ರಾಮದ ಜಮೀನಿನಲ್ಲಿ ಕಾಯಿ ಕೀಳುತ್ತಿದ್ದ ಬೊಮ್ಮೇಗೌಡರೊಂದಿಗೆ ಆಸ್ತಿ ವಿಚಾರವಾಗಿ ಜಗಳ ತೆಗೆದ ಮಗ ಮಂಜೇಗೌಡ ಮಾತು ವಿಕೋಪಕ್ಕೆ ತಿರುಗಿ ಕೊಡಲಿ ತಂದು ಬೊಮ್ಮೇಗೌಡನ ತಲೆ ಭಾಗಕ್ಕೆ ಹಲ್ಲೆ ನಡೆಸಿದನು. ತಕ್ಷಣ ಬೊಮ್ಮೇಗೌಡ ಅವರು ತಪ್ಪಿಸಿಕೊಳ್ಳಲು ಪಕ್ಕದ ಜಮೀನಿಗೆ ಓಡಿದರೂ ಸಹ ಬಿಡದೇ ಮತ್ತೆ ಹಲ್ಲೆ ನಡೆಸಿ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮೃತರ ಸಂಬಂಧಿ ಶಂಕರ್ ಅವರು ಕಿಕ್ಕೇರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ನಾಗಮಂಗಲ ಡಿವೈಎಸ್‍ಪಿ ಚಂದ್ರಶೇಖರ್, ಸಿಪಿಐ ವೆಂಕಟೇಶಯ್ಯ, ಪಿ.ಎಸ್.ಐ ಆರ್.ಸಿದ್ದರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin