ಇಂಗ್ಲೆಂಡ್ ಕ್ಲೀನ್‍ಸ್ವೀಪ್’ನತ್ತ ಕೊಹ್ಲಿ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

kohli
ಕೋಲ್ಕತ್ತಾ, ಜ.21- ಈಗಾಗಲೇ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 2-0 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದ್ದು, ನಾಳೆ ಈಡನ್‍ಗಾರ್ಡನ್‍ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದು, ಕ್ಲೀನ್‍ಸ್ವೀಪ್ ಮಾಡುವ ತವಕದಲ್ಲಿದೆ.  ಇತ್ತ ಪ್ರವಾಸಿ ತಂಡ ಇಂಗ್ಲೆಂಡ್ ಅದ್ಭುತ ಪ್ರದರ್ಶನ ನೀಡಿದರೂ ಸ್ವಲ್ಪ ಅಂತರದಿಂದ ಸೋಲೊಪ್ಪಿಕೊಂಡಿದ್ದು, ನಾಳಿನ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸಿಕೊಳ್ಳಲು ಸಜ್ಜಾಗಿದೆ.  ಹಿರಿಯ ಆಟಗಾರರಾದ ಮಹೇಂದ್ರಸಿಂಗ್ ಧೋನಿ ಮತ್ತು ಯುವರಾಜ್‍ಸಿಂಗ್ ಅವರ ಅದ್ಭುತ ಶತಕಗಳ ನೆರವಿನಿಂದ ಭಾರತ 2ನೆ ಪಂದ್ಯದಲ್ಲಿ 15 ರನ್‍ಗಳಿಂದ ಗೆಲುವು ಸಾಸುವ ಮೂಲಕ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಜಯಿಸಿತ್ತು.  ಭಾರತದ ಆರಂಭಿಕರು  ಕಳಪೆ ಪ್ರದರ್ಶನ ನೀಡಿದ್ದು ಶಿಖರ್ ಧವನ್ ಮತ್ತು ಕೆ.ಎಲ್.  ರಾಹುಲ್ ಫಾರ್ಮ್ ನಲ್ಲಿರದಿದ್ದರೂ ಭಾರತಕ್ಕೆ ಸ್ವಲ್ಪ ಹಿನ್ನಡೆಯಾಗಿದೆ.

ಮಧ್ಯ ಕ್ರಮಾಂಕದಲ್ಲಿ ಕೆದರ್ ಜಾಧವ್, ಯುವರಾಜ್‍ಸಿಂಗ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಹಾಗೂ ಹಾರ್ದಿಕ್‍ಪಾಂಡ್ಯ ಅವರ ಬ್ಯಾಟಿಂಗ್ ಬಲವಿದೆ. ಬೋಲಿಂಗ್ ಬೌಲರ್‍ಗಳು ಸ್ವಲ್ಪ ದುಬಾರಿಯಾದರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆರ್.ಅಶ್ವಿನ್, ಭುವನೇಶ್ವರ್‍ಕುಮಾರ್, ಜಸ್ಬಿತ್ ಬುಮ್ರಾರಂತಹ ಬೌಲರ್‍ಗಳಿದ್ದು, ಎದುರಾಳಿ ಆಟಗಾರರನ್ನು ಕಟ್ಟಿ ಹಾಕುವ ಸಾಮಥ್ರ್ಯ ಹೊಂದಿದ್ದಾರೆ. ಎರಡೂ ಪಂದ್ಯಗಳಲ್ಲಿ ಉಭಯ ತಂಡಗಳು 300ರ ಗಡಿ ದಾಟಿದ್ದು, 3ನೆ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin