ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-11-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi x1

ನಿತ್ಯ ನೀತಿ :

ಯಾರು ಕೋಪಕ್ಕೆ ವಶವಾಗುವನೋ ಅವನು ಪವಿತ್ರನಾದವನಲ್ಲ , ತಪಸ್ವಿಯಲ್ಲ , ಯಾಗ ಮಾಡುವವನೂ ಅಲ್ಲ, ಧರ್ಮಯುಕ್ತನೂ ಅಲ್ಲ. ಅಂಥವನಿಗೆ ಇಹಪರಗಳೆಂಬ ಎರಡು ಲೋಕಗಳೂ ಇಲ್ಲ. – ಸುಭಾಷಿತಸುಧಾನಿಧಿ

ಪಂಚಾಂಗ : ಶನಿವಾರ, 19.11.2016

ಸೂರ್ಯ ಉದಯ ಬೆ.06.20 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ಬೆ.10.51 / ಚಂದ್ರ ಉದಯ ರಾ.10.48
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠೀ
(ರಾ.2.18) / ನಕ್ಷತ್ರ: ಪುಷ್ಯ (ರಾ.3.44) / ಯೋಗ: ಶುಕ್ಲ (ರಾ.2.45) / ಕರಣ: ಗರಜೆ-ವಣಿಜ್
(ಮ.2.49-ರಾ.2.18) / ಮಳೆ ನಕ್ಷತ್ರ: ಅನೂರಾಧ (ಪ್ರಾ.ಮ.1.39) / ಮಾಸ: ವೃಶ್ಚಿಕ / ತೇದಿ: 04

ರಾಶಿ ಭವಿಷ್ಯ :

ಮೇಷ : ರಾಜಕೀಯ ಕ್ಷೇತ್ರದಲ್ಲಿ ನಾನಾ ರೀತಿಯಲ್ಲಿ ಗೊಂದಲಗಳು ಕಂಡುಬರುತ್ತವೆ, ಮಾತು ತುಟಿ ಮೀರದಿರಲಿ
ವೃಷಭ : ವಿದೇಶ ಸಂಚಾರಯೋಗ ಒದಗಿ ಬಂದೀತು, ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸ್ನಾನ ಭಾಗ್ಯವಿದೆ
ಮಿಥುನ: ಅವಿವಾಹಿತರಿಗೆ ಅದೃಷ್ಟಬಲ ಒದಗಿ ಬಂದೀತು
ಕಟಕ: ಆತ್ಮೀಯರು ನಿಮ್ಮಿಂದ ದೂರ ಸರಿಯುವರು, ದೇಹಾರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು
ಸಿಂಹ: ಸೋಲು-ಗೆಲುವು ಮಿಶ್ರ ಫಲ ನೀಡಲಿದೆ, ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು
ಕನ್ಯಾ: ಲೆಕ್ಕಾಚಾರ ಅಗತ್ಯವಿದೆ, ಸಂಬಂಧಿಕರಿಂದ ಗೌರವಾದರ ಲಭಿಸಲಿದೆ, ಕೃಷಿ ಕ್ಷೇತ್ರದಲ್ಲಿ ಕೃಷಿಕರಿಗೆ ನಿರಾಸೆ
ತುಲಾ: ದೂರದರ್ಶನ, ಚಲನಚಿತ್ರ ಕ್ಷೇತ್ರದವರಿಗೆ ಉತ್ತಮ ಯಶಸ್ಸು ಇರುತ್ತದೆ, ಆಗಾಗ ವಾಹನ ರಿಪೇರಿಗಾಗಿ ಧನವ್ಯಯ
ವೃಶ್ಚಿಕ : ಅಧ್ಯಾಪನ, ಅರ್ಚಕ ವೃತ್ತಿಯವರಿಗೆ ಸಂತೃಪ್ತಿ
ಧನುಸ್ಸು: ಗೃಹ ನಿರ್ಮಾಣ ಕಾರ್ಯಕ್ಕೆ ಅನುಕೂಲ
ಮಕರ: ಅಲಂಕಾರಿಕ ವಸ್ತುಗಳ ಖರೀದಿಗೆ ಧನವ್ಯಯ
ಕುಂಭ: ಹಿರಿಯರ ಆರೋಗ್ಯ ಕೆಡಬಹುದು
ಮೀನ: ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳದಿರಿ

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin