ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-12-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ  : ಸಂಸಾರ ಅಥವಾ ಜೀವನ ಒಂದು ಕಹಿಯಾದ ಮರ. ಆದರೆ ಅದರಲ್ಲಿಯೂ ಅಮೃತದಂತಹ ಎರಡು ಹಣ್ಣುಗಳಿವೆ. ಸುಭಾಷಿತವನ್ನು ಅಥವಾ ಒಳ್ಳೆಯ ಮಾತುಗಳನ್ನು ಸವಿಯುವುದು ಮತ್ತು ಸಜ್ಜನರೊಡನೆ ಸೇರುವುದು.  – ಸುಭಾಷಿತರತ್ನ ಭಾಂಡಾಗಾರ

Rashi x1

ಪಂಚಾಂಗ : ಮಂಗಳವಾರ, 13.12.2016

ಸೂರ್ಯ ಉದಯ  ಬೆ.6.33 / ಸೂರ್ಯ ಅಸ್ತ  .5.55
ಚಂದ್ರ ಉದಯ  ಸಂ.5.30 / ಚಂದ್ರ ಅಸ್ತ ನಾ.ಬೆ.6.35
ದುರ್ಮುಖಿ ಸಂವತ್ಸರ / ದುರ್ಮುಖಿ ಸಂವತ್ಸರ

ತಿಥಿ: ತ್ರಯೋದಶಿ (ಮ.12.59) /ನಕ್ಷತ್ರ: ಕೃತ್ತಿಕಾ (ರಾ.12.39) / ಯೋಗ: ಶಿವ-ಸಿದ್ಧಿ  (ಬೆ.09.11-ರಾ.04.55)
ಕರಣ: ತೈತಿಲ-ಗರಜೆ  (ಮ.12.59-ರಾ.11.08) / ಮಳೆ ನಕ್ಷತ್ರ: ಜ್ಯೇಷ್ಠಾ / ಮಾಸ: ವೃಶ್ಚಿಕ / ತೇದಿ: 27

ಮೇಷ : ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ, ಉದ್ಯೋಗ ವ್ಯವಹಾರಗಳಲ್ಲಿ ಲಾಭಾಂಶ ಹೆಚ್ಚಾಗುವುದು
ವೃಷಭ : ಮನೆಯಲ್ಲಿ ಒಂಟಿತನ ಬೇಸರ ತಂದೀತು, ತಪ್ಪು ಅಭಿಪ್ರಾಯಗಳು ಕಲಹಕ್ಕೆ ಕಾರಣವಾಗಬಹುದು
ಮಿಥುನ: ವಿದ್ಯಾರ್ಥಿಗಳ ಪರಿಶ್ರಮ ನಿರೀಕ್ಷಿತ ರೀತಿ ಯಲ್ಲಿ ಪರಿಣಾಮ ಬೀರಲಾರದು
ಕಟಕ: ಹೊಸ ವ್ಯಾಪಾರ- ವ್ಯವ ಹಾರಗಳಿಗೆ ಇದು ಸಕಾಲವಲ್ಲ, ಸಂಚಾರದಲ್ಲಿ ಜಾಗ್ರತೆ ಇರಲಿ
ಸಿಂಹ: ವೃತ್ತಿರಂಗದಲ್ಲಿ ಹಿತಶತ್ರು ಗಳ ಕಿರಿಕಿರಿ ಗೋಚರಕ್ಕೆ ಬಂದೀತು
ಕನ್ಯಾ: ನ್ಯಾಯಾಲಯದ ಕೆಲಸ- ಕಾರ್ಯಗಳಿಗೆ ಚುರುಕು ಮುಟ್ಟಿಸಬೇಕು
ತುಲಾ: ನೂತನ ಕೆಲಸ-ಕಾರ್ಯ ಗಳು ವಿಳಂಬವಾದರೂ ಅನುಕೂಲವಾಗಲಿದೆ, ಅಲಂಕಾರಿಕ ವಸ್ತುಗಳ ಖರೀದಿ
ವೃಶ್ಚಿಕ : ರಾಜಕೀಯ ವರ್ಗದವರಿಗೆ ತುಸು ಸಮಾಧಾನಕರ ವಾತಾವರಣವಿರುತ್ತದೆ, ಆಗಾಗ ದೇಹಾಯಾಸ ತಂದೀತು
ಧನುಸ್ಸು: ಯುವತಿಯರಿಗೆ ವೈವಾಹಿಕ ಭಾಗ್ಯದ ಕನಸು ನನಸಾಗುತ್ತದೆ
ಮಕರ: ಸಣ್ಣ ಸಣ್ಣ ವಿಚಾರಗಳಲ್ಲಿ ಮನಸ್ಸನ್ನು ಕೆಡಿಸಿಕೊಳ್ಳದಿರಿ
ಕುಂಭ : ಸಹಧರ್ಮಿಣಿಯ ಸಹಕಾರವಿದ್ದರೂ ಕಿರಿಕಿರಿ ಮೀನ: ಶತ್ರುಗಳಿಂದ ದೂರವಿದ್ದಷ್ಟು ಉತ್ತಮ

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin