ಉತ್ತಮ ಆರೋಗ್ಯಕ್ಕೆ ಇವುಗಳು ಅನಿವಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

HEalth--01

ಹಣ್ಣು ತರಕಾರಿಗಳು ಮನುಷ್ಯನ ಆಹಾರ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದ್ವಿದಳ, ಏಕದಳ ಧಾನ್ಯಗಳು ಸೇರಿದಂತೆ ವಿವಿಧ ಗೆಡ್ಡೆ-ಗೆಣುಸುಗಳು ಪೌಷ್ಟಿಕಾಂಶ ನೀಡುವ ಆಹಾರ ಮೂಲಗಳು.  ಆಹಾರ ಪದ್ಧತಿಯಲ್ಲಿ ಕೆಲವೊಂದು ಪದಾರ್ಥಗಳನ್ನು ಇಷ್ಟೇ ಪ್ರಮಾಣದಲ್ಲಿ ಹೀಗೆಯೇ ಬಳಸಬೇಕೆಂಬ ನಿಯಮಗಳು ಸಹ ಬಹಳ ಹಿಂದಿನಿಂದಲೂ ಪಾಲಿಸುತ್ತಿರುವುದಲ್ಲದೆ ಅದು ಆರೋಗ್ಯ ದೃಷ್ಟಿಯಿಂದಲೂ ಹೆಚ್ಚು ಪೂರಕವಾಗಿವೆ.  ಕೆಲವೊಂದು ಹಣ್ಣು-ತರಕಾರಿಗಳನ್ನು ಬೆಳಗಿನ ಉಪಹಾರ, ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಬಳಸಬೇಕೆಂಬುದು ತಜ್ಞರ ಅಭಿಪ್ರಾಯ. ಅದರಂತೆ ಬಳಕೆ ಮಾಡಿದರೆ ಸಾಕಷ್ಟು ಲಾಭವೂ ಉಂಟು. ಅದರಲ್ಲಿ ಕೆಲವನ್ನು ತಿಳಿಯುವುದು ಅನಿವಾರ್ಯ.

ಸೇಬು(ಆಪಲ್) :  

ಬೆಳಗಿನ ಉಪಹಾರದಲ್ಲಿ ಇದನ್ನು ಸೇವಿಸಿದರೆ ಹೆಚ್ಚು ಉಪಯುಕ್ತವಾಗಿದ್ದು, ಇದರಲ್ಲಿರುವ ಕೆಲವು ಅಂಶಗಳು ಜೀರ್ಣ ಮಾಡಿಕೊಳ್ಳಲು ಕಷ್ಟವಾಗುವುದರಿಂದ ರಾತ್ರಿ ಊಟದ ಸಮಯದಲ್ಲಿ ಸೇಬು ಸೇವನೆ ಸರಿಯಲ್ಲ ಎಂದು ಹೇಳುತ್ತಾರೆ.  ರಾತ್ರಿ ವೇಳೆ ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಹೆಚ್ಚುವ ತÉೂಂದರೆ ಕಾಡಲಿದೆ.

ಬಾಳೆಹಣ್ಣು :

ಮಧ್ಯಾಹ್ನ ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ತ್ವಚ್ಛೆಯ ಸೌಂದರ್ಯ ವೃದ್ಧಿಸುತ್ತದೆಯಲ್ಲದೆ ದೇಹಕ್ಕೆ ಉತ್ತಮ ಪೆÇೀಷಕಾಂಶ ದೊರಕಿ ಹೆಚ್ಚು ಶಕ್ತಿಯುತವಾಗಿರಲು ನೆರವಾಗುತ್ತದೆ. ರಾತ್ರಿ ವೇಳೆ ಸೇವನೆಯಿಂದ ಜೀರ್ಣ ಕ್ರಿಯೆಗೆ ತೊಂದರೆಯಾಗಲಿದೆ.

ಕಿತ್ತಲೆ:

ಬೆಳಗಿನ ಉಪಹಾರದಲ್ಲಿ ಕಿತ್ತಲೆ ಸೇವನೆಯನ್ನು ಮಾಡದಿರುವುದೇ ಉತ್ತಮ. ಕಾರಣ ಇದರಿಂದ ಆಸಿಡಿಟಿ ಹೆಚ್ಚಿ ಹೊಟ್ಟೆ ಉಬ್ಬರದಂತಹ ಸಮಸ್ಯೆ ಎದುರಾಗುತ್ತದೆ. ಬದಲಿಗೆ ಲಘು ಉಪಹಾರ(ಸ್ನ್ಯಾಕ್ಸ್)ದ ವೇಳೆ ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚಿ ಮೆಟಬಾಲಿಸಂ ವೃದ್ದಿಗೂ ಕಾರಣವಾಗಲಿದೆ.

ಏಪ್ರಿಕಾಟ್ಸ್ :

ಹಣ್ಣು ಹಾಗೂ ಒಣಹಣ್ಣು ರೂಪದಲ್ಲಿ ಬಳಸುವ ಇದನ್ನು ಬೆಳಗಿನ ಉಪಹಾರದಲ್ಲಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ರಾತ್ರಿ ವೇಳೆ ಇದರ ಸೇವನೆ ಬೇಡವೇ ಬೇಡ.
ಆಲೂಗಡ್ಡೆ: ಆಲೂಗಡ್ಡೆಯಲ್ಲಿರುವ ಹೆಚ್ಚಿನ ಮಿನರಲ್‍ಗಳಿಂದಾಗಿ ಇದನ್ನು ಬೆಳಗಿನ ಉಪಹಾರದಲ್ಲಿ ಸೇವಿಸುವುದು ಸೂಕ್ತ. ಹೆಚ್ಚಿರುವ ಕ್ಯಾಲೋರಿಗಳಿಂದಾಗಿ ರಾತ್ರಿ ಇದನ್ನು ತೆಗೆದುಕೊಂಡರೆ ತೂಕ ಹೆಚ್ಚಾಗುವ ಸಮಸ್ಯೆ ಕಾಡುತ್ತದೆ. .

ಟೊಮ್ಯಾಟೊ:

ಬೆಳಗಿನ ವೇಳೆ ಟೊಮ್ಯಾಟೊ ಬಳಕೆಯಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೆ ಮೊಟಬಾಲಿಸಂ ಸಹ ವೃದ್ದಿಯಾಗುತ್ತದೆ. ರಾತ್ರಿ ವೇಳೆ ಇದರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಡಾರ್ಕ್ ಚಾಕೊಲೇಟ್: ಈ ಚಾಕೊಲೇಟ್‍ಗಳು ದೇಹಕ್ಕೆ ಆ್ಯಂಟಿಆಕ್ಸಿಡೆಂಟ್‍ಗಳನ್ನು ಒದಗಿಸುವುದರಿಂದ ಬೆಳಗಿನ ಉಪಹಾರದ ವೇಳೆ ಸೇವಿಸುವುದು ಉತ್ತಮ. ಇದು ಬೇಗ ವಯಸ್ಸಾಗುವುದನ್ನು ತಡೆಯುತ್ತದೆಯಲ್ಲದೆ ಹೃದಯಬೇನೆಯಿಂದಲೂ ದೂರವಿಡಲಿದೆ. ಸಂಜೆ ವೇಳೆ ಲಘು ಉಪಹಾರದಂತೆ ಈ ಚಾಕೊಲೇಟ್‍ಗಳನ್ನು ಬಳಸುವುದರಿಂದ ದೇಹದಲ್ಲಿ ಕಬ್ಬಿಣಾಂಶ ಶೇಖರಣೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ನಟ್ಸ್ :

ಗೋಡಂಬಿ, ಬಾದಾಮಿಯಂತಹ ಬೀಜಗಳ ಸೇವನೆ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾದದ್ದು ಎಂದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಇದನ್ನು ಮಧ್ಯಾಹ್ನದ ಊಟದಲ್ಲಿ ಬಳಸುವುದರಿಂದ ರಕ್ತದೊತ್ತಡದಂತಹ ಸಮಸ್ಯೆಯಿಂದ ದೂರವಿರಬಹುದು. ರಾತ್ರಿ ವೇಳೆ ಇದನ್ನು ಸೇವಿಸಲೇ ಬೇಡಿ.

ಹಾಲು:

ಬಿಸಿಯಾದ ಹಾಲನ್ನು ರಾತ್ರಿ ತೆಗೆದುಕೊಳ್ಳುವುದರಿಂದ ದೇಹದ ಆರೋಗ್ಯಕ್ಕೂ ಹಾಗೂ ಉತ್ತಮ ನಿದ್ರೆಗೆ ಸಹಕಾರಿಯಾಗಲಿದೆ. ಆದರೆ ಹೆಚ್ಚು ದೈಹಿಕ ಶ್ರಮವಿಲ್ಲದ ಕೆಲಸ ಮಾಡುವವರು ಬೆಳಗಿನ ವೇಳೆ ಹಾಲು ಸೇವಿಸದಿರುವುದು ಸರಿಯಾದ ಕ್ರಮವಲ್ಲ.

ಚೀಸ್:

ಹಾಲಿನ ಉತ್ಪನ್ನಗಳಲ್ಲಿ ಒಂದಾದ ಚೀಸನ್ನು ಬೆಳಗಿನ ವೇಳೆ ಬ್ರೇಕ್‍ಫಾಸ್ಟ್‍ನಲ್ಲಿ ಬಳಸುವುದರಿಂದ ದೇಹದ ತೂಕ ನಿಯಂತ್ರಣದಲ್ಲಿ ಸಹಕಾರಿಯಾಗಲಿದೆ. ಹಾಗಾಗಿ ರಾತ್ರಿ ವೇಳೆಯಂತೂ ಇದನ್ನು ಸೇವಿಸದಿರುವುದು ಒಳಿತು.

ಅನ್ನ:

ರಾತ್ರಿ ವೇಳೆ ಅನ್ನ ಸೇವನೆ ಮಾಡುವ ಅಭ್ಯಾಸವಿದ್ದರೆ ತ್ಯಜಿಸುವುದು ಒಳ್ಳೆಯದು. ಕಾರಣ ಅನ್ನದಿಂದ ತೂಕ ಹೆಚ್ಚುತ್ತದೆ. ಹಾಗಾಗಿ ಮಧ್ಯಾಹ್ನದ ಊಟಕ್ಕೆ ಹೆಚ್ಚಾಗಿ ಬಳಸಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  C

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin