ಎರಡು ತಲೆಯ ವಿಚಿತ್ರ ಕರು ಜನನ

ಈ ಸುದ್ದಿಯನ್ನು ಶೇರ್ ಮಾಡಿ

Cow--01

ಬಂಗಾರಪೇಟೆ, ಜು.9-ತಾಲ್ಲೂಕಿನ ಬೇತಮಂಗಲ ಸಮೀಪ ನಲ್ಲೂರು ಗ್ರಾಮದಲ್ಲಿ ಹಸುವೊಂದು ಎರಡು ತಲೆಯ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಗ್ರಾಮದ ರೈತ ಉಮೇಶ್ ಎಂಬುವರಿಗೆ ಸೇರಿದ ಎಚ್.ಎಫ್ ತಳಿಯನ್ನು ಹೊಂದಿರುವ ಈ ಸೀಮೆ ಹಸು ವಿಚಿತ್ರ ಕರುವಿಗೆ ಜನ್ಮ ನೀಡಿ ಆಶ್ಚರ್ಯವನ್ನುಂಟು ಮಾಡಿದೆ. ಕರುವಿಗೆ ಎರಡು ತಲೆ, ನಾಲ್ಕು ಕಿವಿ, ನಾಲ್ಕು ಕಣ್ಣು, ಎರಡು ಮೂಗು ಇದ್ದು, ಆರೋಗ್ಯವಾಗಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ಜಗತ್ತಿಗೆ ಅಚ್ಚರಿ ಮೂಡಿಸಿರುವ ಈ ಎರಡು ತಲೆಯ ವಿಚಿತ್ರ ಕರು ನೋಡಲು ಜನರು ಮುಗಿಬೀಳುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin