ಕನ್ನಡದಲ್ಲಿ ತೀರ್ಪು ನೀಡಿದ್ದಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಸನ್ಮಾನ 

ಈ ಸುದ್ದಿಯನ್ನು ಶೇರ್ ಮಾಡಿ

KADURU

ಕಡೂರು, ಮೇ 17- ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಕನ್ನಡದಲ್ಲಿ ತೀರ್ಪು ನೀಡಿದ್ದಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಜಿ ಅವರು ಮಡಿಕೇರಿಗೆ ವರ್ಗಾವಣೆಯಾಗಿದ್ದಕ್ಕೆ ಬೀಳ್ಕೊಡುಗೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜ ಎಸ್. ಅಂಕಸದೊಡ್ಡಿ ಅವರು ಕನ್ನಡದಲ್ಲಿ ತೀರ್ಪು ನೀಡಿದ್ದಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮಗಳು ನ್ಯಾಯಾವಾದಿಗಳ ಸಂಘದ ವತಿಯಿಂದ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಜಿ, ಕಡೂರು ನ್ಯಾಯಾಲಯದಲ್ಲಿ ತಾವು ನ್ಯಾಯಾಧೀಶರಾಗಿ ವೃತ್ತಿ ಬದುಕಿನ ಪ್ರಥಮ ಹೆಜ್ಜೆಯನ್ನು ಪ್ರಾರಂಭಿಸಿದೆ. ಇಲ್ಲಿ ತಾವು ಅನೇಕ ಹೊಸ ವಿಚಾರಗಳನ್ನು ಅರಿಯಲು ಹಾಗೂ ವಿಭಿನ್ನ ಅನುಭವಗಳನ್ನು ಪಡೆಯಲು ಸಾಧ್ಯವಾಯಿತು ಎಂದರು.

ನಂತರ ಕನ್ನಡದಲ್ಲಿ ತೀರ್ಪುಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಗೌರವಕ್ಕೆ ಪಾತ್ರರಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜ ಎಸ್. ಅಂಕಸದೊಡ್ಡಿ ಅವರನ್ನು ನ್ಯಾಯಾವಾದಿಗಳ ಸಂಘದ ವತಿಯಿಂದ ಗೌರವಿಸಲಾಯಿತು.ಗೌರವ ಸ್ವೀಕರಿಸಿ ಮಾತನಾಡಿದ ಅವರು, ಈ ಪುರಸ್ಕಾರ ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನ್ಯಾಯಾಲಯದ ಹೆಚ್ಚಿನ ಕಲಾಪಗಳು ಆಂಗ್ಲ ಭಾಷೆಯಲ್ಲಿಯೆ ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ತೀರ್ಪು ನೀಡುವುದು ಕಷ್ಟದ ಕೆಲಸ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅನಿತಾ ಮಾತನಾಡಿ, ವೃತ್ತಿ ಬದುಕಿನಲ್ಲಿ ವರ್ಗಾವಣೆ ಸಹಜ. ಶಿವಾನಂದ ಲಕ್ಷ್ಮಣ ಅಂಜಿ ಉತ್ತಮ ಸ್ನೇಹ ಜೀವಿಯಾಗಿದ್ದು. ಎಲ್ಲರೊಂದಿಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದರು. ಇವರ ಮುಂದಿನ ವೃತ್ತಿ ಜೀವನ ಉಜ್ಜಲವಾಗಿರಲಿ ಎಂದು ಹಾರೈಸಿದರು.  ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ. ಚಿದಂಬರ, ಕಾರ್ಯದರ್ಶಿ ಸುನೀಲ್, ಹಿರಿಯ ವಕೀಲರಾದ ಎಂ.ಹೆಚ್. ಹೆಳವಾರ್, ಬಿ. ಶಿವಕುಮಾರ್. ಕೆ.ಜಿ. ಅಣ್ಣಪ್ಪ, ಕೆ.ಎನ್. ಬೊಮ್ಮಣ್ಣ, ಕೆ.ಪಿ. ನೀಲಕಂಠಪ್ಪ ಮಾತನಾಡಿ ನ್ಯಾಯಾಧೀಶರಿಗೆ ಶುಭ ಹಾರೈಸಿದರು.ಸಹಾಯಕ ಸರ್ಕಾರಿ ಅಭಿಯೋಜಕರಾದ ಹರೀಶ್‍ಕುಮಾರ್, ಮಮತ ವಕೀಲರಾದ ಎನ್. ಶೇಖರ್, ಮಂಜುಳ, ಬಾಲಜಿನಾಯ್ಕ, ಯೋಗಿಶ್, ದೇವರಾಜು, ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin