ಕರಡಿಯೊಂದಿಗೆ ಕಾದಾಡಿ ಗೆದ್ದು ಬಂದ ಭೂಪ ಇವನು

ಈ ಸುದ್ದಿಯನ್ನು ಶೇರ್ ಮಾಡಿ

Bear

ಹುಬ್ಬಳ್ಳಿ,ಆ.24-ತನ್ನ ಮೇಲೆ ಎರಗಿದ ಕರಡಿಯೊಂದಿಗೆ ಎರಡು ಗಂಟೆಗಳ ಕಾಲ ಕಾದಾಡಿ ವ್ಯಕ್ತಿಯೊಬ್ಬರು ಪ್ರಾಣ ಉಳಿಸಿಕೊಂಡರೂ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಹಳಿಯಾಲ ತಾಲ್ಲೂಕಿನ ಗರುಡೊಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು , ಜುಬೇ ವಾಲಂತಿ ಅಡವೆಪ್ಪಾಚೇ(58) ಕರಡಿಯೊಂದಿಗೆ ಕಾದಾಡಿ ಗಾಯಗೊಂಡಿರುವ ವ್ಯಕ್ತಿ.  ಈತ ಇಂದು ಬೆಳಗ್ಗೆ ಗ್ರಾಮದ ಸಮೀಪದ ಕಾಡಿನ ಬಳಿ ಇರುವ ಗದ್ದೆಗೆ ತೆರಳುತ್ತಿದ್ದಾಗ ಏಕಾಏಕಿ ಕರಡಿಯೊಂದು ದಾಳಿ ನಡೆಸಿದೆ. ಇದರಿಂದ ಆಘಾತಕ್ಕೊಳಗಾದ ವ್ಯಕ್ತಿ ಕೂಡಲೇ ಎಚ್ಚೆತ್ತುಕೊಂಡು ಕರಡಿಯೊಂದಿಗೆ ಕಾದಾಡಿ ಕರಡಿಯನ್ನು ವಾಪಸ್ ಕಾಡಿನತ್ತ ಅಟ್ಟಿದ್ದಾರೆ.  ಈ ಕಾದಾಟದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಳಿಯಾಲ ತಾಲ್ಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅರಣ್ಯ ಇಲಾಖೆ ಅಧಿಕಾರಿಗಳು ಸಹ ಆಸ್ಪತ್ರೆಗೆ ಭೇಟಿ ನೀಡಿ ಜುಬೇ ಅವರ ಆರೋಗ್ಯ ವಿಚಾರಿಸಿದ್ದಾರೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin