ಕರಡಿ ದಾಳಿ : ರೈತನಿಗೆ ತೀವ್ರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಜ.9- ಕರಡಿ ದಾಳಿ ನಡೆಸಿದ ಪರಿಣಾಮ ರೈತನೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿಯ ಲಂಬಾಣಿ ತಾಂಡಾದಲ್ಲಿ ನಡೆದಿದೆ.ಇಂದು ಮುಂಜಾನೆ ಹಿಪ್ಪುನೇರಳೆ ತೋಟಕ್ಕೆ ನೀರು ಹಾಯಿಸಲೆಂದು ಲಂಬಾಣಿ ತಾಂಡಾದ ಕೃಷ್ಣನಾಯಕ್ ಎಂಬುವರ ಮಗ ಶಿವನಾಯಕ್ ಹೊಲಕ್ಕೆ ಹೋಗಿದ್ದಾಗ ಹಿಂದಿನಿಂದ ಬಂದ ಕರಡಿ ದಾಳಿ ಮಾಡಿದೆ.  ಶಿವನಾಯಕನ ಮೇಲೆ ಎರಗಿದ ಕರಡಿ, ತಲೆ ಮತ್ತು ಮೈ-ಕೈ ತರಚಿದ ಪರಿಣಾಮ ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಚನ್ನಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin