ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Soniyaನವದೆಹಲಿ, ಆ.3- ತೀವ್ರ ಜ್ವರಭಾದೆಯಿಂದ ಬಳಲುತ್ತಿದ್ದು, ಕಳೆದ ರಾತ್ರಿ ಇಲ್ಲಿನ ಸೇನಾ ರೀಸರ್ಚ್ ಆಂಡ್ ರೆಫರಲ್ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ, ಸೋನಿಯಾರ ಆರೋಗ್ಯ ಕುರಿತಂತೆ ಆಸ್ದಪತ್ರೆಯಿಂದ ಯಾವುದೇ ಅಕೃತ ಹೇಳಿಕೆಗಳು ಬಿಡುಗಡೆಯಾಗಿಲ್ಲ. ನಿನ್ನೆ ವಾರಣಾಸಿಯಲ್ಲಿ ಪಕ್ಷದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕಿ, ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಪ್ರಚಾರ ಕಾರ್ಯವನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸಾಗಿದ್ದರು. ಅವರ ಆರೋಗ್ಯ ಸ್ಥಿರವಾಗಿದೆ. ವಿಶೇಷ ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿದೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣ್‌ದೀಪ್ ಸರ್ಜೀವಾಲಾ ತಿಳಿಸಿದ್ದಾರೆ.  69 ವರ್ಷದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂ ಅವರು ಈ ಬಾರಿ ಗುಜರಾತ್‌ನಲ್ಲಿ ಜಯಭೇರಿ ಬಾರಿಸುವಂತೆ ಪಕ್ಷವನ್ನು ಅಣಿಗೊಳಿಸಲು ಭಾರೀ ಶ್ರಮ ವಹಿಸಿ ಪ್ರಚಾರದಲ್ಲಿ ತೊಡಗಿದ್ದಾರೆ.

Sonia Gandhi Back To Delhi After Varanasi Rally Cut Short

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin

Leave a Reply

Your email address will not be published.

20 + sixteen =