ಕಾಟಾಚಾರದ ಪ್ರೀತಿಯ ಸುಳಿಗೆ ಸಿಲುಕದಿರಿ

ಈ ಸುದ್ದಿಯನ್ನು ಶೇರ್ ಮಾಡಿ

Love--01

– ಹರೀಶ್‍ಗೌಡ, ಕಲ್ಲುಶೆಟ್ಟಹಳ್ಳಿ

ಫೆ.14 ಬಂತೆಂದರೆ ಪ್ರೇಮಿಗಳ ಪಾಲಿನ ಅಚ್ಚುಮೆಚ್ಚಿನ ದಿನ, ಯುವ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹಂಚಿಕೊಂಡು ಸಡಗರದಿಂದ ಸಂಭ್ರಮಿಸುವ ದಿನ. ಯುವಕ-ಯುವತಿಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಾತೊರೆಯುತ್ತಾರೆ. ಪೋಷಕರ ಕಣ್ತಪ್ಪಿಸಿ ಪ್ರಣಯ ಪಕ್ಷಿಗಳು ಎಲ್ಲೆಂದರಲ್ಲಿ ತಿರುಗಾಡುತ್ತಾ ಕದ್ದುಮುಚ್ಚಿ ಪ್ರೀತಿ ಮಾಡುತ್ತೇವೆ. ಕಾಲೇಜಿನಲ್ಲಿ ಓದುತ್ತಿರುವ ಯುವ ಸಮೂಹ ಪ್ರೀತಿಯ ಬಲೆಗೆ ಬಿದ್ದು ಸಿನಿಮಾ, ಪಾರ್ಕ್ ಅಂತಾ ಎಲ್ಲೆಂದರಲ್ಲೇ ಸುತ್ತಾಡುತ್ತಿರುತ್ತಾರೆ. ಪ್ರೇಮಿಗಳು ಪ್ರೀತಿಯ ಸಂಕೇತ ಗುಲಾಬಿ ಹೂ, ಚಾಕೋಲೇಟ್ ನೀಡಿ ಪರಸ್ಪರ ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಕಾಲೇಜ್, ಆಫೀಸ್, ಬಸ್ಸು ರೈಲು ನಿಲ್ದಾಣ, ದೇವಸ್ಥಾನ, ಬಸ್‍ಸ್ಟ್ಯಾಂಡ್‍ನಲ್ಲಿ ಸುಂದರವಾದ ಯುವತಿಯನ್ನು ನೋಡಿದ ತಕ್ಷಣ ಯುವಕನಿಗೆ ಮೊದಲನೆಯ ನೋಟದಲ್ಲೇ ಪ್ರೇಮಾಂಕುರವಾಗಿ, ಅಂದಿನಿಂದ ಮನಸ್ಸಿನಲ್ಲಿ ಏನೋ ಒಂಥ ತಳಮಳ ಉಂಟಾಗಿ ಆ ಹುಡುಗಿಯ ಮೇಲೆ ಪ್ರೀತಿ ಚಿಗುರುತ್ತೆ, ಬಳಿಕ ತನ್ನ ಪ್ರೀತಿಯ ಬಗ್ಗೆ ಅವಳಿಗೆ ಹೇಳಿದರೆ ಒಪ್ಪಿಕೊಳ್ಳತ್ತಾಳೋ ಇಲ್ಲವೋ ಎಂಬುದರ ಬಗ್ಗೆ ಭಯವು ಕೂಡ ಕಾಡುತ್ತಿರುತ್ತದೆ. ತಮ್ಮ ಆಗಾಧ ಪ್ರೀತಿಯನ್ನು ಹಂಚಿಕೊಂಡು ಎಷ್ಟು ಯುವಕರು ಅಥವಾ ಯುವತಿಯರು ಪ್ರೇಮಿಗಳ ದಿನದಲ್ಲಿ ಯಾಶಸ್ವಿಯಾಗಿರುವ ನಿರ್ದೇಶನಗಳು ಸಾಕಷ್ಟಿವೆ. ಅಲ್ಲದೆ, ಅದೆಷ್ಟೂ ಘಟನೆಗಳು ಕೂಡ ವಿಫಲವಾಗಿರುವುದು ಇವೆ.

ಪ್ರೇಮಿಗಳು ಬಿಹಾರದ ಬಡುಕಟ್ಟು ಜನಾಂಗದ ಅಮರ ಪ್ರೇಮಿಗಳ ಕಥೆಯನ್ನು ಓದಲೇಬೇಕು. ದಶರಥ ಮಾಂಜಿ ಅವರ ಪ್ರೀತಿಗೆ ಸರಿದಾಟಿಯೇ ಇಲ್ಲ. ಅವರ ಪ್ರೀತಿ ಆಗಾಧವಾದದ್ದು, ಮಾಂಜಿ ತನ್ನ ಪತ್ನಿಯನ್ನು ತುಂಬಾ ಪ್ರೀತಿ ಮಾಡುತ್ತಿದ್ದನು. ಒಂದು ದಿನ ಮಾಂಜಿಯ ಪತ್ನಿ ನೀರು ತೆಗೆದುಕೊಂಡು ಬೆಟ್ಟದಿಂದ ಬರುತ್ತಿರುವಾಗ ಆಯತಪ್ಪಿ ಕಾಲು ಜಾರಿ ಬಿದ್ದು ತ್ರೀವವಾಗಿ ಗಾಯಗೊಂಡು ಮರಣ ಹೊಂದುತ್ತಾಳೆ, ತನ್ನ ಪತ್ನಿಯನ್ನು ಕಳೆದುಕೊಂಡು ತೀವ್ರ ದುಃಖದಲ್ಲಿ ಮಾಂಜಿ ಇರುತ್ತಾನೆ. ತನ್ನ ಪ್ರೀತಿಯ ಪತ್ನಿಯನ್ನು ಕಳೆದುಕೊಳ್ಳವುದಕ್ಕೇ ಈ ಬೆಟ್ಟವೇ ಕಾರಣ ಎಂದು ರೋಷದಿಂದ ಸತತ 22 ವರ್ಷಗಳ ಕಾಲ ಹಗಲು ರಾತ್ರಿ ಎನ್ನದೇ ಬೆಟ್ಟವನ್ನು ಸಂಪೂರ್ಣವಾಗಿ ಹೊಡೆದು ಹಾಕಿ ಓಡಾಡುವುದಕ್ಕೆ ರಸ್ತೆ ಮಾಡಿಕೊಡುತ್ತಾನೆ. ಪ್ರೇಮ ಶಕ್ತಿಯು ಜಗತ್ತಿನಲ್ಲಿ ಏನಾದರೂ ಸಾಧಿಸಬಹುದು ಎಂದು ರಿಯಲ್ ಕಥೆಯೇ ಪ್ರೇಮಿಗಳಿಗೆ ಸ್ಪೂರ್ತಿ. ಪ್ರೇಮಿಗಳ ಸಮಾಧಿ ಬಿಹಾರದಲ್ಲಿ ಇದ್ದು ಇಂದಿಗೂ ಅಮರ ಪ್ರೇಮಿಗಳಗೆ ಪ್ರೇಮ ಸಾಧದ ಸಂಕೇತವಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರೀತಿ ಅನ್ನೋದು ಕೇವಲ ತಾತ್ಕಲಿಕವಾಗಿದೆ. ಒಂದು ದಿನ ಪ್ರೀತಿಯಾದರೆ, ಮತ್ತೊಂದು ದಿನ ಮದುವೆ, ಮಗದೊಂದು ದಿನ ಬ್ರೇಕಪ್ ಆಗುವುದು. ಇವು ಮೂರು ದಿನದ ಲವ್‍ಗೇಮ್ ಅನ್ನೋದು ಕಾಮನ್ ಆಗಿದೆ. ಹುಡುಗ-ಹುಡುಗಿಯರು ಜಾತಿ, ಪೋಷಕರ ವಿರೋಧ ನಡುವೆಯೂ ಪ್ರೀತಿಸಿ ಮದುವೆ ಆಗಿ ಸುಖ ಜೀವನ ನಡೆಸುತ್ತಿರುವುದು ಬೆರಳಿಣಿಕೆಯಷ್ಟು ಮಾತ್ರ. ಪ್ರೀತಿಯ ವೈಫಲ್ಯದಿಂದ ಬಿದ್ದು ಯುವಜನಾಂಗ ಆತ್ಮಹತ್ಯೆ ಮಾಡಿಕೊಂಡು ತಮ್ಮ ಅಮೂಲ್ಯ ಜೀವನವನ್ನೇ ಕಳೆದುಕೊಳ್ಳುತ್ತಾರೆ. ಅಲ್ಲದೆ, ನೀರಿನಿಂದ ಹೊರ ಬಿದ್ದ ಮೀನಿನಂತೆ ವಿಲವಿಲನೆ ಒದ್ದಾಡುತ್ತಿರುತ್ತಾರೆ.

ಪ್ರೇಮಿಗಳೇ ಪ್ರೇಮದ ಬಲೆಯಲ್ಲಿ ಬಿದ್ದು ಕಟಾಚಾರದ ಪ್ರೀತಿಯ ಸುಳಿಗೆ ಸಿಲುಕಬೇಡಿ. ಪ್ರೀತಿ ಹೆಸರನಲ್ಲಿ ಎಷ್ಟೂ ಪ್ರೇಮಿಗಳು ದೈಹಿಕ ಸಂಪರ್ಕ ಹೊಂದಿ ತಮ್ಮ ಜೀವನವನ್ನು ಹಾಳು ಮಾಡುಕೊಳ್ಳಬೇಡಿ. ಎಚ್ಚರದಿಂದ ಇರುವುದು ಒಳಿತು. ಪ್ರೇಮಿಗಳು ಪರಸ್ಪರ ತಮ್ಮ ಮನಸ್ಸಿನ ಅಂತರಾಳವನ್ನು ಅರ್ಥಮಾಡಿಕೊಂಡು ಪ್ರೀತಿಯ ಸವಿಯುತ್ತಾ ಒಂದಾಗಿ ಬಾಳುವುದೇ ನಿಜವಾದ ಪ್ರೀತಿ, ಇಲ್ಲವಾದರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಹೇಳಿರುವಂತೆ ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದನೆಕಾಯಿಯಂತೆ ಆಗುತ್ತೇ ಅಲ್ಲವೇ.
ಎನಿ ಹೌ ಹ್ಯಾಪಿ ವ್ಯಾಲೈಂಟನ್ಸ್ ಡೇ ಟು ಅಲ್…

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin