ಕುಟುಂಬದವರಿಗಾಗಿ ತನ್ನ ಕನ್ಯತ್ವವನ್ನೇ ಮಾರಾಟಕ್ಕಿಟ್ಟಳು..!

ಈ ಸುದ್ದಿಯನ್ನು ಶೇರ್ ಮಾಡಿ

Girl-Virgin

ರೆನೋ ಅ.23 : ಕೆಲವು ತಮ್ಮವರಿಗಾಗಿ, ತಮ್ಮ ಕುಟುಂಬದವರಿಗಾಗಿ ಎನನ್ನಾದರೂ ತ್ಯಾಗ ಮಾಡಲು ಸಿದ್ದರಾಗಿರುತ್ತಾರೆ. ಆದರೆ ಇಲ್ಲೊಬ್ಬಳು ತನ್ನ ಕುಟುಂಬಕ್ಕಾಗಿ ತನ್ನ ಕನ್ಯತ್ವವನ್ನೇ ತ್ಯಾಗಮಾಡಡುತ್ತಿದ್ದಾಳೆ…!  ಹೌದು, ಸಂಕಷ್ಟದಲ್ಲಿರುವ ತನ್ನ ಕುಟುಂಬದವರಿಗೆ ನೆರವಾಗಲು ಯುವತಿಯೊಬ್ಬಳು ಕನ್ಯತ್ವ ಮಾರಾಟಕ್ಕೆ ಇಟ್ಟಿದ್ದಾಳೆ. ಅಮೆರಿಕದ ರೆನೋ ನಗರ ನಿವಾಸಿಯಾಗಿರುವ 20 ವರ್ಷದ ಯುವತಿ ಕ್ಯಾಥರಿನ್ ಸ್ಟೋನ್ ಕನ್ಯತ್ವವನ್ನು ಮಾರಾಟಕ್ಕೆ ಇಟ್ಟಿರುವುದಾಗಿ ತಿಳಿಸಿದ್ದಾಳೆ. ಈಕೆಯ ಕುಟುಂಬದವರು ಅಗ್ನಿ ಅವಘಡದಲ್ಲಿ ಮನೆ ಕಳೆದುಕೊಂಡಿದ್ದು, ಬೀದಿಗೆ ಬಿದ್ದಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಇಂತಹ ತೀರ್ಮಾನವನ್ನು ಕೈಗೊಂಡಿದ್ದೇನೆ ಎಂದು ಕ್ಯಾಥರಿನ್ ಹೇಳಿದ್ದಾಳೆ.

ನಾನು ನನ್ನ ಕುಟುಂಬದವರನ್ನು ಹೆಚ್ಚಾಗಿ ಇಷ್ಟಪಡುತ್ತೇನೆ. ಅವರಿಗಾಗಿ ಈ ತ್ಯಾಗ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ನೇವಾಡದ ಲೀಗಲ್ ಬ್ರಾಥಲ್ ನಲ್ಲಿ ಬಿಡ್ ನಡೆಯಲಿದ್ದು, ಈಗಾಗಲೇ ಹಲವಾರು ಮಂದಿ ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ 4 ಲಕ್ಷ ಡಾಲರ್ ವರೆಗೆ ಬಿಡ್ ನಡೆದಿದೆ ಎಂದು ಹೇಳಲಾಗಿದೆ. ಆದರೆ ಅವಳು ಇನ್ನೂ ಹೆಚ್ಚಿನ ಮೊತ್ತಕ್ಕಾಗಿ ಎದುರುನೋಡುತ್ತಿದ್ದಾಳೆ.

Virgin-01

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin