ಕುದುರೆ ವ್ಯಾಪಾರಕ್ಕೆ ಎಡೆಮಾಡಿಕೊಟ್ಟಿದ್ದಾರೆ ಕರ್ನಾಟಕದ ರಾಜ್ಯಪಾಲರು – ಡಿಎಂಕೆ

ಈ ಸುದ್ದಿಯನ್ನು ಶೇರ್ ಮಾಡಿ

DMK
ಚನ್ನೈ,ಮೇ.17-ಕರ್ನಾಟಕದ ರಾಜ್ಯಪಾಲ ವಜುಭಾಯ್‍ವಾಲಾ ಅವರು ಬಿಜೆಪಿಯವರಿಗೆ ಸರ್ಕಾರ ರಚನೆ ಮಡಲು ಅವಕಾಶ ಕಲ್ಪಿಸುವ ಮೂಲಕ ಕುದುರೆ ವ್ಯಾಪಾರಕ್ಕೆ ಎಡೆ ಮಾಡಿದ್ದಾರೆ ಎಂದು ಡಿಎಂಕೆ ಹೇಳಿದೆ. ಕರ್ನಾಟಕದ ರಾಜ್ಯಪಾಲರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ,ಬಿಜೆಪಿಗೆ ಸರ್ಕಾರ ರಚಿಸಲು ಆದೇಶ ನೀಡಿ ಆತುರದ ನಿರ್ದಾರ ಕೈಗೊಂಡಿದ್ದಾರೆ, ಇದು ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದಂತಾಗಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟ್ಯಾಲಿನ್ ಟ್ವಟ್ ಮಾಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮತ್ತು ಬಿಎಸ್‍ಪಿ ಪಕ್ಷಗಳು ಒಂದಾಗಿ ಮೊದಲು ಬಂದು ತಮಗೆ ಬಹುಮತವಿದೆ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರೂ ರಾಜ್ಯಪಾಲ ವಜುಭಾಯ್‍ವಾಲಾ ಅವರು ಅದಕ್ಕೆ ಆಸ್ಪದ ನೀಡದೆ ನಂತರ ಬಂದ ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದು ಸಂವಿಧಾನ ವಿರೋಧಿ ಎಂದು ಅವರು ಹೇಳಿದ್ದಾರೆ. ಇಲ್ಲಿನ ಭ್ರಷ್ಟ ಎಡಿಎಂಕೆ ಸರ್ಕಾರಕ್ಕೆ ರಕ್ಷಣೆ ನೀಡಿರುವ ಬಿಜೆಪಿಯ ನಡೆಯನ್ನು ನಮ್ಮ ರಾಜ್ಯದ ಜನತೆ ಅರಿತಿದೆ ಎಂದು ಮತ್ತೊಂದು ಟ್ವಟ್‍ನಲ್ಲಿ ಅವರು ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin