ಕೆಂಪೇಗೌಡ -2 ಚಿತ್ರದ ಶೂಟಿಂಗ್ ವೇಳೆ ಕೋಮಲ್-ಯೋಗಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Loos-Mada

ಚೆನ್ನೈ,ಆ.30-ಕೆಂಪೇಗೌಡ -2 ಚಿತ್ರೀಕರಣದ ವೇಳೆ ಅವಘಡ ಸಂಭವಿಸಿ ನಟ ಲೂಸ್ ಮಾದ ಹಾಗೂ ಕೋಮಲ್ ಅವರಿಗೆ ಗಾಯಗಳಾಗಿದ್ದು,ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದಲ್ಲಿಂದು ಶಂಕರೇಗೌಡ ನಿರ್ದೇಶನದ ಕೆಂಪೇಗೌಡ -2 ಚಿತ್ರೀಕರಣದ ನಡೆಯುತ್ತಿತ್ತು. ಈ ದೃಶ್ಯದಲ್ಲಿ ಬೈಕ್ ರೇಸಿಂಗ್ ಸ್ಟಂಟ್ ಇತ್ತು. ಮಾಸ್ಟರ್ ಜಾಲಿ ಬಾಸ್ಟೀನ್ ಬೈಕ್ ರೇಸಿಂಗ್ ಸ್ಟಂಟ್ ಮಾಡಿ ತೋರಿಸಿದ್ದಾರೆ.

ಅದರಂತೆ ಬೈಕ್‍ನಲ್ಲಿ ಮುಂದೆ ಲೂಸ್ ಮಾದ,ಹಿಂಬದಿಯಲ್ಲಿ ಕೋಮಲ್ ಕುಳಿತುಕೊಂಡು ಚೇಸಿಂಗ್ ಮಾಡುತ್ತಿದ್ದ ವೇಳೆ ಏಕಾಏಕಿ ಎಕ್ಸಲೇಟರ್ ಜಾಸ್ತಿ ಮಾಡಿದ ಹಿನ್ನಲೆಯಲ್ಲಿ ಆಯಾ ತಪ್ಪಿ ಬೈಕ್ ಜೊತೆಗೆ ಇವರಿಬ್ಬರೂ ಕೆಳಗೆ ಬಿದ್ದಿದ್ದಾರೆ.ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin