ಕೇವಲ ಮೊಬೈಲ್‍ಗಾಗಿ ಫ್ಲಿಫ್ ಕಾರ್ಟ್ ಡೆಲಿವರಿ ಬಾಯ್ ಜೀವ ತೆಗೆದ ಶೋಕಿಲಾಲ..!

ಈ ಸುದ್ದಿಯನ್ನು ಶೇರ್ ಮಾಡಿ

Mobile-01

ಬೆಂಗಳೂರು, ಡಿ.14- ಶೋಕಿಗಾಗಿ ದುಷ್ಟರು ಏನೆಲ್ಲಾ ಮಾಡುತ್ತಾರೆ… ಅಮಾಯಕರು ಹೇಗೆ ಜೀವ ಕಳೆದುಕೊಳ್ಳುತ್ತಾರೆ ಎಂಬುದು ನಗರದಲ್ಲಿ ನಡೆದ ಡೆಲಿವರಿ ಬಾಯ್‍ನ ಹತ್ಯೆಯ ಅಪರಾಧ ಕೃತ್ಯ ಬಯಲಿಗೆ ಬಂದಿದೆ.  ಕಳೆದ ಡಿ.9ರಂದು ವಿಜಯನಗರ ಬಳಿಯ ಸರಸ್ವತಿ ನಗರದ ಕಟ್ಟಡವೊಂದರಲ್ಲಿ ನಂಜುಂಡಸ್ವಾಮಿ ಎಂಬ ಫ್ಲಿಪ್‍ಕಾರ್ಟ್ ಕಂಪೆನಿಯ ಡೆಲಿವರಿ ಬಾಯ್ ಕೊಲೆ ಪ್ರಕರಣವನ್ನು ಫ್ಲಿಪ್ ಕಾರ್ಟ್ಲೀಸರು ಚಾಕಚಕ್ಯತೆಯಿಂದ ಭೇದಿಸಿ ವರುಣ್ ಎಂಬ ಆರೋಪಿಯನ್ನುಬಂಧಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಫ್ಲಿಪ್ ಕಾರ್ಟ್ಲೀಸರು ಕೇವಲ ಮೊಬೈಲ್‍ಗಾಗಿ ಈ ಕೊಲೆ ನಡೆದಿದೆ ಎಂಬುದನ್ನು ತಿಳಿದು ಕೆಲಕಾಲ ಅಚ್ಚರಿಗೊಂಡಿದ್ದಾರೆ.

ಘಟನೆ ವಿವರ:

ಬಂಧಿತ ಆರೋಪಿ ವರುಣ್ ಡಿ.5ರಂದು ಅಂತರ್ಜಾಲದ ಮೂಲಕ ಫ್ಲಿಪ್‍ಕಾರ್ಟ್‍ನಲ್ಲಿ ಸುಮಾರು 11 ಸಾವಿರ ರೂ. ಬೆಲೆಯ ಸ್ಮಾರ್ಟ್ ಮೊಬೈಲ್‍ಫೋನ್‍ವೊಂದನ್ನು ಬುಕ್ ಮಾಡಿದ್ದ.
ಇದನ್ನು ಕೊಡಲು ಡಿ.8ರಂದು ವರುಣ್‍ನನ್ನು ಸಂಪರ್ಕಿಸಿದ್ದ ನಂಜುಂಡಸ್ವಾಮಿ ಸರಸ್ವತಿಪುರಂಗೆ ಬಂದಿದ್ದರು. ಆಗ ಆತನನ್ನು ನಿರ್ಮಾಣ ಹಂತದ ಕಟ್ಟಡವೊಂದರ ಮೇಲೆ ಕರೆದೊಯ್ಯಲಾಗಿತ್ತು. ಹಣ ಇಲ್ಲದಿದ್ದರೂ ಶೋಕಿ ಜೀವನದ ಹಿಂದೆ ಬಿದ್ದಿದ್ದ ವರುಣ್ ಹೇಗಾದರೂ ಮಾಡಿ ಮೊಬೈಲ್ ಲಪಟಾಯಿಸಬೇಕೆಂಬ ಆಲೋಚನೆಯಲ್ಲೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ.

ಅದರಂತೆ ನಂಜುಂಡಸ್ವಾಮಿ ಮೊಬೈಲ್ ನೀಡಲು ಬಂದಾಗ ಅದನ್ನು ತೆರೆದು ನೋಡಿ ಖಾತ್ರಿಪಡಿಸಿಕೊಳ್ಳುವುದಾಗಿ ಹೇಳಿಕೊಂಡು ಅತ್ತ ಇತ್ತ ಓಡಾಡುತ್ತಿರುವಾಗ ಆರೋಪಿ ವರುಣ್ ಏಕಾಏಕಿ ಮಾರಕಾಸ್ತ್ರದಿಂದ ಒಡೆದು ಅಮಾಯಕನ ಜೀವವನ್ನೇ ತೆಗೆದಿದ್ದಾನೆ. ನಂತರ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ ಆತ ಯಾರಿಗೂ ತಿಳಿಯದಂತೆ ಅಡ್ಡಾಡಿಕೊಂಡಿದ್ದ. ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ವಿಜಯನಗರ ಫ್ಲಿಪ್ ಕಾರ್ಟ್ಲೀಸರು ಫ್ಲಿಪ್‍ಕಾರ್ಟ್‍ನಲ್ಲಿ ಆರ್ಡರ್ ಮಾಡುವಾಗ ನೀಡಿದ್ದ ದಾಖಲಾತಿಗಳನ್ನು ಪರಿಶೀಲಿಸಿ ನೋಡಿದಾಗ ಅಸ್ಪಷ್ಟ ಮಾಹಿತಿ ಸಿಕ್ಕಿತ್ತು.
ಆದರೂ ಛಲಬಿಡದೆ ಮೊಬೈಲ್ ಕೋಡ್ ಸಂಖ್ಯೆ ಮತ್ತು ಈಗ ಅದು ಬಳಕೆಯಲ್ಲಿದೆಯೇ ಎಂಬುದನ್ನು ಪದೇ ಪದೇ ಖಾತ್ರಿಪಡಿಸಿಕೊಂಡು ಕೊನೆಗೂ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ರಾತ್ರಿ ವರುಣ್‍ನನ್ನು ಬಂಧಿಸಲಾಗಿದ್ದು, ಈತ ಜಿಮ್‍ವೊಂದರ ಉದ್ಯೋಗಿ ಎಂದು ತಿಳಿದುಬಂದಿದೆ. ಈತನ ಬಳಿ ಇದ್ದಂತಹ ಸುಮಾರು 10 ಸಾವಿರ ರೂ., ಮೊಬೈಲ್, ಸೀರೆ, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin