ಕೊಡಗು ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Naxal--01

ಮಡಿಕೇರಿ, ಫೆ.3- ಕಳೆದ ರಾತ್ರಿ ಕೊಡಗಿನ ಗಡಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದು, ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ. 3 ರಿಂದ 4 ಮಂದಿ ಹಸಿರು ಬಣ್ಣದ ಬಟ್ಟೆ ತೊಟ್ಟು ಬಂದಿದ್ದ ಅವರು, 2700 ರೂ. ನೀಡಿ ಯುವಕನೊಬ್ಬನಿಂದ ದವಸಧಾನ್ಯಗಳನ್ನೆಲ್ಲಾ ಖರೀದಿಸಿದ್ದಾರೆ.  ಬೆಲೆ ಕೇಳುವ ನೆಪದಲ್ಲಿ ಧಮ್ಕಿ ಹಾಕಿದಾಗ ಯುವಕ ಅವರ ಬ್ಯಾಗ್‍ನಲ್ಲಿ ರಿವಾಲ್ವರ್, ಬಂದೂಕುಗಳು ಇರುವುದು ನೋಡಿದ್ದಾನೆ. ನಂತರ ನಾವು ಬಂದಿದ್ದ ವಿಷಯವನ್ನು ತಿಳಿಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ನಕ್ಸಲ್ ನಿಗ್ರಹ ಪಡೆ ಸ್ಥಳಕ್ಕೆ ಭೇಟಿ ನೀಡಿದ್ದು, ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin