ಕೊನೆಗೂ ಟ್ರಂಪ್ ಮೀಟ್ ಮಾಡಲಿದ್ದಾನೆ ಕಿರಾತಕ ಕಿಮ್..!

ಈ ಸುದ್ದಿಯನ್ನು ಶೇರ್ ಮಾಡಿ

Kim-Trump--01
ವಾಷಿಂಗ್ ಟನ್,ಜೂ.5-ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್-ಉನ್ ಭೇಟಿಗೆ ಕಡೆಗೂ ಮುಹೂರ್ತ ಕೂಡಿ ಬಂದಿದೆ. ಟ್ರಂಪ್ ಹಾಗೂ ಕಿಮ್ ಜೂನ್ 12ರಂದು ಸಿಂಗಪೂರದಲ್ಲಿ ಭೇಟಿ ಮಾಡಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಎರಡೂ ದೇಶಗಳ ನಾಯಕರು ಸಿಂಗಪುರದ ಕಾಲಮಾನ ಅಂದು ಬೇಳಿಗ್ಗೆ 9 ಗಂಟೆಗೆ ಭೇಟಿಯಾಗಲಿದ್ದಾರೆ. ಆದರೆ ಸಿಂಗಪುರದ ಯಾವ ನಗರದಲ್ಲಿ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸಂಡರ್ ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin