ಕೊಲ್ಕತದಲ್ಲಿ 56 ಲಕ್ಷ ರೂ. ನಕಲಿ ನೋಟು ವಶ, ಐವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Fake-Notes--02

ಕೊಲ್ಕತ, ಮಾ.3-ಪಶ್ಚಿಮ ಬಂಗಾಳದ ರೌಡಿ ನಿಗ್ರಹ ದಳದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 56.74,00 ರೂ. ನಕಲಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಲ್ಕತದ ಫ್ಯಾನ್ಸಿ ಮಾರ್ಕೆಟ್ ಪ್ರದೇಶದಲ್ಲಿ ಖೋಟಾ ನೋಟುಗಳನ್ನು ಬಳಸಿ ದುಬಾರಿ ಬೆಲೆಯ ಮೊಬೈಲ್‍ಗಳನ್ನು ಖರೀದಿಸಲು ಈ ಆರೋಪಿಗಳು ಬಂದಿದ್ದಾಗ ಅವರನ್ನು ಬಂಧಿಸಲಾಗಿದೆ.
ಬಂಧಿತರಿಂದ 2,000 ರೂ. ಮುಖಬೆಲೆಯ 56,74,000 ರೂ.ಗಳ ನಕಲಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

20 ಲಕ್ಷ ರೂ. ಹಳೆ ಕರೆನ್ಸಿ ಹೊಂದಿದ್ದ ವ್ಯಕ್ತಿ ಸೆರೆ :

ಹರ್ಯಾಣದ ರೋಹಟಕ್ ಜಿಲ್ಲೆಯ ಸೋನಿಪಟ್‍ನಲ್ಲಿ ವಿಶೇಷ ತನಿಖಾ ತಂಡದ (ಎಸ್‍ಐಟಿ) ಪೊಲೀಸರು ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬಂಧಿಸಿ ಆತನ ಬಳಿ ಇದ್ದ 20 ಲಕ್ಷ ರೂ. ನಿಷೇಧಿತ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.  ಸೋನಿಪಟ್‍ನ ಗನೌರ್ ನಿವಾಸಿ ರಾಮ್‍ಪಾಲ್ ಕುಮಾರ್ ಬಂಧಿತ ವ್ಯಕ್ತಿ. 1 ಲಕ್ಷ ರಊ. ಕಮಿಷನ್ ಆಸೆಗಾಗಿ ಈ ಹಣವನ್ನು ವ್ಯಕ್ತಿಯೊಬ್ಬರಿಗೆ ವಿತರಿಸಲು ಹವಣಿಸುತ್ತಿದ್ದಾಗ ಈತನನ್ನು ಪೊಲೀಸರು ಬಂಧಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin