ಕೋಟ್ಯಂತರ ಮಂದಿ ಇಷ್ಟಪಟ್ಟ ಈ ಮಕ್ಕಳ ವೈರಲ್ ವಿಡಿಯೋನ ನೀವೂ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Boys--01

ಬಂಧನದಿಂದ ಮುಕ್ತವಾಗಬೇಕೆಂಬ ಛಲವಿದ್ದವರಿಗೆ ಈ ಪ್ರಪಂಚದಲ್ಲಿ ಯಾವುದೂ ತಡೆಯಾಗದು. ಮುದ್ದಾದ ಇಬ್ಬರು ಪುಟ್ಟ ಮಕ್ಕಳ ಇಂಥ ತುಂಟಾಟವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 4.22 ಕೋಟಿ ಮಂದಿ ವೀಕ್ಷಿಸಿ ಥ್ರಿಲ್ ಆಗಿದ್ದಾರೆ.   ಈ ವಿಡಿಯೋದಲ್ಲಿ ತೊಟ್ಟಿಲ ಒಳಗೆ ಇರುವ ತನ್ನ ತಮ್ಮನನ್ನು ಹೊರಗೆ ಬರುವಂತೆ ಮಾಡಲು ಪುಟ್ಟ ಹುಡುಗನೊಬ್ಬ ತೋರಿದ ಅಪಾರ ಬುದ್ದಿವಂತಿಕೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.ತಂದೆ-ತಾಯಿ ಕ್ರಿಬ್‍ನಲ್ಲಿ (ನೆಲದಲ್ಲಿ ಶಿಶುವನ್ನು ಸುರಕ್ಷಿತವಾಗಿ ಇಡುವ ಕಟೆಕಟೆ ಇರುವ ತೊಟ್ಟಿಲು) ಪುಟ್ಟ ಮಗುವನ್ನು ಇರಿಸಿ ಆತನ ಅಣ್ಣನನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗಿದ್ದರು.

https://www.youtube.com/watch?v=aTG750gwVyA

ತನ್ನ ಸಹೋದರ ಸ್ವಚ್ಚಂದವಾಗಿ ಆಡುತ್ತಿರುವುದನ್ನು ಗಮನಿಸಿದ ಕ್ರಿಬ್‍ನಲ್ಲಿದ್ದ ಮಗು ತಾನೂ ಹೊರಗೆ ಬಂದು ಆತನೊಂದಿಗೆ ಆಡಲು ಹಾತೊರೆಯಿತು. ಆದರೆ ತೊಟ್ಟಿಲ ಎತ್ತರದ ಕಟಕಟೆ ಅಡಿಯಾಗಿತ್ತು. ತಮ್ಮನ್ನು ತನ್ನೊಂದಿಗೆ ಆಟಕ್ಕೆ ಕರೆದುಕೊಳ್ಳಲು ಅಣ್ಣ ವಯಸ್ಸಿಗೆ ಮೀರಿದ ಚತುರತೆ ಪ್ರದರ್ಶಿಸಿದ. ಮನೆಯಲ್ಲಿದ್ದ ನೀಲಿ ಬಣ್ಣದ ಕುರ್ಚಿಯನ್ನು ತಂದು ತೊಟ್ಟಿಲಿನ ಒಳಗೆ ಇಳಿಸಿ ಅದರೊಳಗೆ ತಾನೂ ಇಳಿದು ಹೊರ ಬಂದ. ಇದೇ ರೀತಿ ಮಾಡುವಂತೆ ತಮ್ಮನಿಗೂ ಪ್ರೊತ್ಸಾಹಿಸಿದ. ಅಣ್ಣನನ್ನು ಅನುಕರಿಸಿದ ಆ ಮಗು ಕುರ್ಚಿಯ ಸಹಾಯದಿಂದ ಕ್ರಿಬ್‍ನ ಭದ್ರಕೋಟೆಯನ್ನು ದಾಟಿ ಹೊರಗೆ ಬರುವಲ್ಲಿ ಯಶಸ್ವಿಯಾಯಿತು. ಇದು ನಿಜಕ್ಕೂ ಗ್ರೇಟ್ ಎಸ್ಕೇಪ್.

ಈ ಸ್ವಾರಸ್ಯಕರ ವೀಡಿಯೋವನ್ನು ಡೈಲಿ ಬಂಪ್ಸ್ ಫೇಸ್‍ಬುಕ್ ಪೇಜ್‍ನಲ್ಲಿ ಹಾಕಲಾಗಿದೆ. ಕೆಲವೇ ಗಂಟೆಗಳಲ್ಲಿ 4 ಕೋಟಿ 22 ಲಕ್ಷ 27 ಸಾವಿರದ 869 ಮಂದಿ ಈ ದೃಶ್ಯ ವೀಕ್ಷಿಸಿ ಅಪೂರ್ವ ಸಹೋದರರ ಸಾಹಸವನ್ನು ನೋಡಿ ಖುಷಿ ಪಟ್ಟು ತಲೆದೂಗಿದ್ದಾರೆ. ಲಕ್ಷಾಂತರ ಪತ್ರಿಕ್ರಿಯೆಗಳು ವ್ಯಕ್ತವಾಗಿವೆ. ಎಲ್ಲರೂ ಇದನ್ನು ದಿ ಗ್ರೇಟ್ ಎಸ್ಕೇಪ್ ಎಂದೇ ಬಣ್ಣಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin