ಗಂಡು ಮಗು ಆಗದಿದ್ದಕ್ಕೆ 3 ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ…!

ಈ ಸುದ್ದಿಯನ್ನು ಶೇರ್ ಮಾಡಿ

Suicide--01

ಚಿಕ್ಕಬಳ್ಳಾಪುರ, ಫೆ 16- ಗಂಡುಮಗುವಿಗಾಗಿ ಹಂಬಲಿಸುತ್ತಿದ್ದ ತಾಯಿ ಮೂರನೇ ಹೆರಿಗೆಯಲ್ಲೂ ಹೆಣ್ಣು ಮಗುವಾಗಿದ್ದಕ್ಕೆ ಮನನೊಂದು ತನ್ನ ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ದಾರುಣ ಘಟನೆ ಗುಡಿ ಬಂಡೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಗಂಗರಾಜು ಪತ್ನಿ ನಾಗ ಶ್ರೀ(30) ಎಂಬುವರು ಮಕ್ಕಳಾದ ನವ್ಯಶ್ರೀ (5) ದಿವ್ಯಶ್ರೀ (2) ಹಾಗೂ ಎರಡು ತಿಂಗಳ ಮಗುವನ್ನು ಮೊದಲು ಬಾವಿಗೆ ತಳ್ಳಿ ನಂತರ ತಾನೂ ಬಾವಿಗೆ ಜಿಗಿದು ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸೋದರ ಮಾವನನ್ನೇ ಮದುವೆಯಾಗಿದ್ದ ನಾಗಶ್ರೀ ಹೆಣ್ಣುಮಕ್ಕಳೇ ಇರುವುದರಿಂದ ಖಿನ್ನತೆಗೆ ಒಳಗಾಗಿದ್ದ ಈಕೆ ಈ ಬಗ್ಗೆ ತನ್ನ ಮನೆ ನೆರೆ ಹೊರೆಯವರ ಬಳಿ ನೋವು ತೋಡಿಕೊಂಡು,ಸಾಯುವ ಮಾತುಗಳನ್ನಾಡಿದ್ದರು ಈಕೆಯ ಗಂಡ ಗಂಗರಾಜು ಕಲ್ಲು ಕೆಲಸ ಹಾಗೂ ಕೃಷಿ ಕೆಲಸ ಮಾಡುತ್ತಿದ್ದ ಎಂದು ಎಸ್ಪಿ ಕಾರ್ತಿಕ್‍ರೆಡ್ಡಿ ಈಸಂಜೆ ಗೆ ತಿಳಿಸಿದ್ದಾರೆ.  ಕೊಲೆ ಹಾಗೂ ಅಸ್ವಾಭಾವಿಕ ಸಾವು ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin