ಚಿಕ್ಕಪ್ಪನನ್ನೇ ಕೊಲೆಗೈದು ಆರೋಪಿ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Murder-Axe--002
ವಿಜಯಪುರ, ಮೇ 20- ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನೇ ಕೊಂದಿರುವ ಹೇಯ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ರಾಣಗಟ್ಟಿ (55) ಕೊಲೆಯಾದ ದುರ್ದೈವಿ. ರಾಮಗೊಂಡ ರಾಣಗಟ್ಟಿ ಕೊಲೆ ಮಾಡಿದ ಆರೋಪಿ. ನಿನ್ನೆ ರಾತ್ರಿ ರಾಮಗೊಂಡನ ಮನೆಯವರಿಗೂ ಆತನ ಚಿಕ್ಕಪ್ಪ ಶರಣಪ್ಪನ ಮನೆಯವರಿಗೂ ಜಗಳ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ.

ಕೋಪಗೊಂಡ ರಾಮಗೊಂಡ ತನ್ನ ಚಿಕ್ಕಪ್ಪ ಶರಣಪ್ಪನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇಂಡಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin