ಚಿನ್ನಕ್ಕಾಗಿ ಹೂತಿದ್ದ ಶವ ಹೊರತೆಗೆದ ಕಳ್ಳರು..!

ಈ ಸುದ್ದಿಯನ್ನು ಶೇರ್ ಮಾಡಿ

Dead-Body--01

ಕಲ್ಬುರ್ಗಿ, ಅ.24- ಆಭರಣದ ಸಮೇತ ಶವ ಸಂಸ್ಕಾರ ಮಾಡಿದ್ದನ್ನು ಅರಿತ ಕಳ್ಳರು ಶವದ ಮೇಲಿದ್ದ 50 ಗ್ರಾಂ ಚಿನ್ನಾಭರಣವನ್ನು ದೋಚಿರುವ ಘಟನೆ ಅಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಅಳಂದ ತಾಲ್ಲೂಕಿನ ಖಜೋರಿ ಗ್ರಾಮದ ವೃದ್ಧೆಯು ಮೃತಪಟ್ಟಿದ್ದು , ಆಕೆಯನ್ನು 50 ಗ್ರಾಂ ಚಿನ್ನಾಭರಣದ ಜೊತೆಗೆ ಮಣ್ಣು ಮಾಡಲಾಗಿತ್ತು. ನಿನ್ನೆ ರಾತ್ರಿ ಕಳ್ಳರು ಸಮಾಧಿಯನ್ನು ಹೊರ ತೆಗೆದು ಶವದ ಮೇಲಿದ್ದ 50 ಗ್ರಾಂ ಚಿನ್ನಾಭರಣವನ್ನು ದೋಚಿ ಶವವನ್ನು ಹೊರಗೆಯೇ ಬಿಟ್ಟು ಪರಾರಿಯಾಗಿದ್ದಾರೆ.

ಇಂದು ಬೆಳಗ್ಗೆ ಗ್ರಾಮಸ್ಥರು ಶವ ಹೊರಗಿರುವುದನ್ನು ಕಂಡು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕುಟುಂಬಸ್ಥರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿನ್ನಾಭರಣ ಸಮೇತ ವೃದ್ಧೆಯನ್ನು ಸಮಾಧಿ ಮಾಡಿರುವುದು ಅರಿತವರೇ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಅಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin