ಚೀನಾದ ಶಾಂಘೈ ಏರ್ ಪೋರ್ಟ್ ನಲ್ಲಿ ಕನ್ನಡಿಗರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Shangai--01
ನವದೆಹಲಿ,ಏ.1- ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಪರದಾಡಿದ ಪ್ರಸಂಗ ವರದಿಯಾಗಿದೆ. ವಿವಿಧ ಅಧಿಕೃತ ಕಾರ್ಯಕ್ರಮಗಳಿಗಾಗಿ ಚೀನಾಗೆ ತೆರಳಿದ್ದ 200ಕ್ಕೂ ಹೆಚ್ಚು ಕನ್ನಡಿಗರು ಸ್ವದೇಶಕ್ಕೆ ತೆರಳಲು ಪೂರ್ವಭಾವಿಯಾಗಿ ವಿಮಾನ ಯಾನಕ್ಕಾಗಿ ಟಿಕೆಟ್‍ಗಳನ್ನು ನಿಗದಿಗೊಳಿಸಿದ್ದರು.

ಆದರೆ ಶಾಂಘೈ ವಿಮಾನ ನಿಲ್ದಾಣಕ್ಕೆ ಬಂದ ಕನ್ನಡಿಗರಿಗೆ ನಿರಾಸೆ ಕಾದಿತ್ತು. ರಾತ್ರಿ 10 ಗಂಟೆಗೆ ಹೊರಡಬೇಕಾದ ವಿಮಾನ ಕೆಲವು ಗಂಟೆಗಳಾದರೂ ಬರಲೇ ಇಲ್ಲ. ಇದರಿಂದ ಹತಾಶರಾದ ಕನ್ನಡಿಗರು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಸಂಪರ್ಕಿಸಿ ವಿಚಾರಿಸಿದಾಗ ಅವರು ಉಡಾಫೆ ಉತ್ತರ ನೀಡಿದರು. ಕನ್ನಡಿಗರು ತಾಳ್ಮೆಯಿಂದ ಕಾಯುತ್ತಿದ್ದರೂ ಅವರನ್ನು ಸಮಾಧಾನಗೊಳಿಸುವ ಕನಿಷ್ಟ ಸೌಜ್ಯನ್ಯವನ್ನು ತೋರದೆ ಶಾಂಘೈ ಏರ್ ಪೋರ್ಟ್ನವರು ಉದ್ದಟತನ ಪ್ರದರ್ಶಿಸಿದರು.
ಕುಪಿತಗೊಂಡ ಕನ್ನಡಿಗರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅವರು ಅಲ್ಲಿಂದ ಕಾಲ್ಕಿತ್ತರು. ಹಲವು ಗಂಟೆಗಳ ಕಾಲ ಗೊಂದಲದ ವಾತಾವರಣದಲ್ಲಿ ಪ್ರಯಾಣಿಕರು ಪರದಾಡಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin