ಚೊಚ್ಚಲ ಯಾನ ಆರಂಭಿಸಿದ ವಿಶ್ವದ ಬೃಹತ್ ವಿಹಾರ ನೌಕೆ

ಈ ಸುದ್ದಿಯನ್ನು ಶೇರ್ ಮಾಡಿ

ds

ಪ್ರಶಾಂತ ಸಾಗರದಲ್ಲಿ ವಿಹಾರ ನೌಕೆಯಲ್ಲಿ ತೇಲುತ್ತಾ ಸಮುದ್ರಯಾನ ಮಾಡುವುದು ಒಂದು ಸುಂದರ ಅನುಭವ. ವಿಶ್ವದ ಅತ್ಯಂತ ದೊಡ್ಡ ಐಷಾರಾಮಿ ನೌಕೆ ಬಾರ್ಸಿಲೋನಾದಿಂದ ತನ್ನ ಚೊಚ್ಚಲ ಯಾನ ಆರಂಭಿಸಿ ಸುದ್ದಿ ಮಾಡಿದೆ. ಸಿಂಫೋನಿ ಆಫ್ ದಿ ಸೀಸ್(ಹಾರ್ಮೋನಿ ಆಫ್ ಸೀಸ್)-ಇದು ಜಗತ್ತಿನ ಅತಿ ದೊಡ್ಡ ವಿಹಾರ ನೌಕೆ. ದಿ ರಾಯಲ್ ಕೆರಿಬಿಯನ್ಸ್ ಸಂಸ್ಥೆಯ ಈ ಹೊಸ ಮೆಗಾ ಶಿಪ್ 6,680 ಅತಿಥಿಗಳನ್ನು ಹೊತ್ತೊಯ್ಯುವ ಅಗಾಧ ಸಾಮಥ್ರ್ಯ ಹೊಂದಿದೆ. ಇದರ ತೂಕ 2,28,081 ಟನ್‍ಗಳು. ಇದು ಐದು ಫುಟ್ಬಾಲ್ ಕ್ರೀಡಾಂಗಣಗಳಿಗೆ ಸಮ.

ಸ್ಪೇನ್‍ನ ಬಾರ್ಸಿಲೋನಾದಿಂದ ಈ ಐಷಾರಾಮಿ ದೋಣಿ ತನ್ನ ಅಧಿಕೃತ ಪ್ರಥಮ ಯಾನ ಆರಂಭಿಸಿದೆ. ಇದೇ ವೇಳೆ ವಿಹಾರಿ ನೌಕೆಗಳು ಮತ್ತು ಪ್ರವಾಸೋದ್ಯಮದಿಂದ ಸಾಗರದ ಮತ್ತು ಸ್ಥಳೀಐ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು. ಪಲ್ಮಾ ಡಿ ಮ್ಯಾಲೊರ್ಸಾ ದ್ವೀಪದ ಮೂಲಕ ಈ ನೌಕೆಯು ಫ್ರಾನ್ಸ್’ನ ಪ್ರೊವೆನ್ಸ್, ರೋಮ್‍ನ ಫ್ಲೋರೆನ್ಸ್ ಮತ್ತು ಪಿಸಾ ಹಾಗೂ ಇಟಲಿಯ ನೇಪಲ್ಸ್ ತಲುಪಲಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin