ಚೊಚ್ಚಲ ಹೆರಿಗೆಯಲ್ಲೇ 3 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

3-Baby

ರಾಯಚೂರು,ಫೆ.21-ಚೊಚ್ಚಲ ಹೆರಿಗೆಯಲ್ಲೇ ಮಹಿಳೆಯೊಬ್ಬಳು ಮೂರು ಶಿಶುಗಳಿಗೆ ಜನ್ಮದ ನೀಡಿದ ಅಪರೂಪದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ನಡೆದಿದೆ.   ರಾಜನಬೀ(23) ಎಂಬ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡು ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಎರಡು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಗಂಡು ಮಗುವಿನ ತೂಕ 1.3 ಕೆಜಿ, ಒಂದು ಹೆಣ್ಣು ಮಗು 1 ಕೆಜಿ ಮತ್ತೊಂದು ಮಗು 900 ಗ್ರಾಂ ತೂಕವಿದೆ. ಸಾಮಾನ್ಯ ಹೆರಿಗೆಯಾಗಿರುವುದು ಕೂಡ ವಿಶೇಷವಾಗಿದೆ. ಆರೋಗ್ಯ ದೃಷ್ಟಿಯಿಂದ ತಾಯಿ ಮಕ್ಕಳನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.   ಶಿಶುಗಳ ತೂಕ ಕಡಿಮೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಸೂತಿ ತಜ್ಞ ಡಾ.ನಾಗರಾಜ್ ಕಾಟಾ ಮತ್ತು ಡಾ.ಗಣೇಶ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin