ಜಂಟಿಯಾಗಿ ಡ್ರಾಮ ಜ್ಯೂನಿಯರ್ ಕಿರೀಟ ಮುಡಿಗೇರಿಸಿಕೊಂಡ ಪುಟ್ಟರಾಜು, ಚಿತ್ರಾಲಿ

ಈ ಸುದ್ದಿಯನ್ನು ಶೇರ್ ಮಾಡಿ

drama-junior

ಗದಗ, ಸೆ. 26– ಕಿರುತೆರೆ ಇತಿಹಾಸದಲ್ಲೇ ಸಾಕಷ್ಟು ಕುತೂಹಲ ಮೂಡಿಸಿದ ಡ್ರಾಮಾಜ್ಯೂನಿಯರ್ಸ್ ಮುಕುಟ ಯಾರಿಗೆ ಒಲಿಯಲಿದೆ ಎಂಬ ನಿರೀಕ್ಷೆಗೆ ಗದಗ್‍ನ ಪುಟ್ಟರಾಜು ಹಾಗೂ ಚಿತ್ರಾಲಿ ಅವರು ಅವರು ಜಂಟಿ ಚಾಂಪಿಯನ್ ಆಗುವ ಮೂಲಕ ತೆರೆಬಿದ್ದಿದೆ. ವಿದ್ಯಾದಾನ ಸಮಿತಿ ಹೈಸ್ಕೂಲ್‍ನಲ್ಲಿ ಆಂಗಳದಲ್ಲಿ ಹಮ್ಮಿಕೊಂಡಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ ಪುಟ್ಟರಾಜು ಹಾಗೂ ಚಿತ್ರಾಲಿ ಜಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಕಾರ್ಯಕ್ರಮಜೀ ಕನ್ನಡ ವಾಹಿನಿಯಲ್ಲಿ ಅ.1 ಹಾಗೂ 2 ರಂದು ಪ್ರಸಾರವಾಗಲಿದೆ.

ಈ ಹಿಂದೆ ಮಹೇಂದ್ರ ಹಾಗೂ ಅಮೋಘ ಅವರು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದ್ದಾರೆ ಎಂಬ ರೂಮರ್‍ಗಳು ಬಂದಿದ್ದವು. ಈಗ ಉತ್ತರ ಕರ್ನಾಟಕದವನೇ ಆದ ಪುಟ್ಟರಾಜು ಹಾಗೂ ಎಲ್ಲರ ಕಣ್ಮಣಿ ಎನಿಸಿದ್ದ ಚಿತ್ರಾಲಿ ಡ್ರಾಮಾ ಜೂನಿಯರ್ಸ್‍ನ ಮುಕುಟ ಪ್ರಾಯರಾಗಿದ್ದರೂ ಕೂಡ ಚಾನಲ್‍ನವರು ಸ್ಪಷ್ಟಪಡಿಸಲಿಲ್ಲ. ಖ್ಯಾತ ಚಿತ್ರನಟಿ ಲಕ್ಷ್ಮಿ , ನಟ ವಿಜಯರಾಘವೇಂದ್ರ ಹಾಗೂ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಜಡ್ಜ್‍ಗಳಾಗಿದ್ದ ಡ್ರಾಮಾ ಜ್ಯೂನಿಯರ್ಸ್‍ನ ಗ್ರ್ಯಾಂಡ್ ಫಿನಾಲೆಯಲ್ಲಿ ಅಜಿಂತ್ಯಾ, ತುಷಾರ್, ಪುಟ್ಟರಾಜು, ಅಮೋಘ, ಚಿತ್ರಾಲಿ, ಮಹೇಂದ್ರ, ರೇವತಿ ಹಾಗೂ ತೇಜಸ್ವಿನಿಯವರು ಪೈಪೋಟಿ ನಡೆಸಿದ್ದರು.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin