ಜಿಎಸ್‍ಟಿಯಿಂದ ದುಬಾರಿಯಾಗಲಿದೆ ಬ್ಯಾಂಕಿಂಗ್ ಸೇವೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Banking--01

ನವದೆಹಲಿ, ಜೂ.29- ಜುಲೈ 1 ರಿಂದ ದೇಶಾದ್ಯಂತ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ಧತಿ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಎಲ್ಲ ಬ್ಯಾಂಕ್‍ಗಳು ಸಲ್ಲಿಸುವ ಸೇವೆಗಳು ದುಬಾರಿಯಾಗಲಿವೆ. ಎಟಿಎಂ ವ್ಯವಹಾರ, ಡೆಬಿಟ್-ಕ್ರೆಡಿಟ್ ಕಾರ್ಡ್ ಬಳಕೆ, ಇಎಂಐ, ವಿಮಾ ಕಂತು ಮೊದಲಾದ ಅಘತ್ಯ ಸೇವೆಗಳಿಗೆ ಬ್ಯಾಂಕ್‍ಗಳು ಶುಲ್ಕ ವಿಧಿಸಲಿವೆ. ಈಗಾಗಲೇ ಸೇವಾ ಶುಲ್ಕದ ಬಗ್ಗೆ ಮಾಹಿತಿ ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಹಿಂದೆ ಇದ್ದ ಶೇ.15ರಷ್ಟು ಪ್ರಮಾಣದ ಆರ್ಥಿಕ ಸೇವೆಗಳು ಜಿಎಸ್‍ಟಿ ಜಾರಿ ನಂತರ ಶೇ.18ರಷ್ಟು ಏರಿಕೆಯಾಗಲಿದೆ. ಅಂದರೆ ಜು.1ರ ನಂತರ ಸೇವಾ ಶುಲ್ಕದಲ್ಲಿ ಶೇ.3ರಷ್ಟು ಹೆಚ್ಚಳವಾಗಲಿದೆ.

ಕೇಮದ್ರ ರಾಷ್ಟ್ರೀಕೃತ ಬ್ಯಾಂಕ್‍ಗಳು ನಾಲ್ಕು ಉಚಿತ ವ್ಯವಹಾರಗಳ ನಂತರ ಪ್ರತಿಯೊಂದು ವಹಿವಾಟಿಗೂ 90ರೂ. ಶುಲ್ಕ ಮತ್ತು ಶೇ.15ರಷ್ಟು ಸೇವಾ ತೆರಿಗೆ ವಿಧಿಸಲಿದೆ ಎಂದು ಮೂಲಗಳು ಹೇಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin