ಜು.1ರಿಂದ ಜಿಎಸ್‍ಟಿ ಜಾರಿ ಹಿನ್ನೆಲೆ, ನೋಂದಣಿಗೆ ಮುಂದಾದ ಥಿಯೇಟರ್ ಮಾಲೀಕರು

ಈ ಸುದ್ದಿಯನ್ನು ಶೇರ್ ಮಾಡಿ

GST-Tax

ಬೆಂಗಳೂರು,ಜೂ.28-ಜುಲೈ 1ರಿಂದ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ(ಜಿಎಸ್‍ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಚಲನಚಿತ್ರ ಮಂದಿರಗಳ ಮಾಲೀಕರು ಜಿಎಸ್‍ಟಿಗೆ ಹೆಸರು ನೋಂದಾಯಿಸಲು ಮುಂದಾಗಿದ್ದಾರೆ.  ಜುಲೈ 1ರಿಂದ ಸಿನಿಮಾ ಟಿಕೆಟ್ ಮೇಲೆ ಜಿಎಸ್‍ಟಿ ತೆರಿಗೆ ವಿಧಿಸುತ್ತಿರುವ ಕಾರಣದಿಂದಾಗಿ ಸಿಂಗಲ್ಸ್ ಸ್ಕ್ರೀನ್ ಥಿಯೇಟರ್ ಮಾಲೀಕರು ತರಾತುರಿಯಲ್ಲಿ ಜಿಎಸ್‍ಟಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.  100ರೂ. ಒಳಗಿನ ಟಿಕೆಟ್ ಮೇಲೆ ಶೇ.18 ಜಿಎಸ್‍ಟಿ ಮತ್ತು 100 ರೂ. ಮೇಲ್ಪಟ್ಟ ಟಿಕೆಟ್‍ಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸುವುದು ಕಡ್ಡಾಯ ಎಂದು ಹಣಕಾಸು ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ನೋಂದಣಿ ಅನಿವಾರ್ಯವಾಗಿದೆ.

ಜಿಎಸ್‍ಟಿ ವ್ಯವಸ್ಥೆಯಡಿ ಸಿನಿಮಾ ಟಿಕೆಟ್ ಮೇಲಿನ ತೆರಿಗೆಯಲ್ಲಿ ಯಾವುದೇ ರೀತಿಯ ವಿನಾಯ್ತಿಯು ಇರುವುದಿಲ್ಲ. ಒಂದು ವೇಳೆ ರಾಜ್ಯ ಸರ್ಕಾರಗಳು ಪ್ರಾದೇಶಿಕ ಸಿನಿಮಾಗಳ ತೆರಿಗೆಯನ್ನು ಡಿಬಿಟಿ ಮೂಲಕ ಹಿಂದಿರುಗಿಸಬಹುದು ಎಂದು ಸ್ವತಃ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin