ಜ್ವಾಲಾಮುಖಿ ಸ್ಫೋಟ ಭೀತಿಯಿಂದ 1.20 ಲಕ್ಷ ಜನರು ಪಲಾಯನ

ಈ ಸುದ್ದಿಯನ್ನು ಶೇರ್ ಮಾಡಿ

ಕರಂಗಸೆಮ್(ಇಂಡೋನೆಷ್ಯಾ), ಸೆ.29-ಇಂಡೋನೆಷ್ಯಾದ ಸಕ್ರಿಯ ಅಗ್ನಿಪರ್ವತ ಮೌಂಟ್ ಅಗುಂಗ್ ಯಾವುದೇ ಸಮಯದಲ್ಲಿ ಸ್ಫೋಟಗೊಂಡು ಜ್ವಾಲಾಮುಖಿ ಹೊರಹಾಕಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 1.20 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಜಗತ್ತ್ರಸಿದ್ಧ ಬಾಲಿ ದ್ವೀಪ, ಕುಟಾದ ಪ್ರವಾಸಿ ತಾಣಗಳ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಸ್ಥಳಾಂತರಿಸಗೊಳ್ಳುವುದಕ್ಕೂ ಮುನ್ನ ಸುಮಾರು 62,000 ಮಂದಿ ಅಪಾಯಕಾರಿ ವಲಯದಲ್ಲಿದ್ದರು.

Bali-volcano

1963ರ ನಂತರ ಇದೇ ಮೊದಲ ಬಾರಿಗೆ ಜ್ವಾಲ್ವಾಮುಖಿ ಆಸ್ಫೋಟಗೊಳ್ಳುವ ಆತಂಕವಿದ್ದು, ಆಗಸ್ಟ್‍ನಿಂದಲೂ ಪರ್ವತ ಕಂಪಿಸುತ್ತಿದ್ದು, ಹೊಗೆ ಕಾಣಿಸಿಕೊಳ್ಳುತ್ತಿದೆ. ಅಗ್ನಿಪರ್ವತ ಒಡಲಲ್ಲಿ ಲಾವಾರಸ ಕುದಿಯುತ್ತಿದೆ ಎಂಬುದನ್ನು ಭೂಗರ್ಭ ವಿಜ್ಞಾನಿಗಳು ತಿಳಿಸಿದ್ದಾರೆ. ಮೌಂಟ್ ಅಗುಂಗ್ ಅಗ್ನಿಪರ್ವತ 1963ರಲ್ಲಿ ಸ್ಫೋಟಗೊಂಡು ಜ್ವಾಲ್ವಾಮುಖಿ ಪ್ರವಾಹದಲ್ಲಿ 1,600ಕ್ಕೂ ಹೆಚ್ಚು ಮಂದಿ ಬೆಂದು ಹೋಗಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin