ತಗಡಿನ ಶೆಡ್ ಮೇಲೆ ವಿದ್ಯುತ್ ತಂತಿ ಬಿದ್ದು ಓರ್ವ ಸಾವು, 6 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Shed

ಬಾಗಲಕೋಟೆ, ಮೇ 27- ಭಾರೀ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ತಗಡಿನಿಂದ ನಿರ್ಮಿಸಿದ್ದ ಶೆಡ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಶಾಕ್‍ನಿಂದ ಒಬ್ಬರು ಸಾವನ್ನಪ್ಪಿ, ಮಗು ಸೇರಿದಂತೆ 6 ಮಂದಿ ಗಾಯಗೊಂಡಿರುವ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ. ಸಂತೇವಾಡ ಪಟ್ಟಣದಲ್ಲಿ ಕೆಲ ಕೂಲಿ ಕಾರ್ಮಿಕರು ಶೆಡ್‍ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದು , ನಿನ್ನೆ ಸಂಜೆ ಭಾರೀ ಮಳೆ, ಗಾಳಿ ಬೀಸಿದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದ್ದು , ತಂತಿಗಳು ತಂಡಾಗಿ ಅದು ಶೆಡ್‍ವೊಂದರ ಮೇಲೆ ಬಿದ್ದಿದೆ.  ಒಬ್ಬರ ಪಕ್ಕ ಒಬ್ಬರು ಮಲಗಿದ್ದಾಗ ಒಬ್ಬರಿಗೆ ವಿದ್ಯುತ್ ಸ್ಪರ್ಶವಾಗಿ ಅದು ಎಲ್ಲರಿಗೂ ವ್ಯಾಪಿಸಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎಲ್ಲರೂ ನಿತ್ರಾಣಗೊಂಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಕ್ಕಪಕ್ಕದವರು ಮರ ಬಳಸಿ ಜಾಗರೂಕತೆಯಿಂದ ಎಲ್ಲರನ್ನೂ ಹೊರಗೆ ತಂದು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಗದ್ದೆಪ್ಪ ಬಂಡಿವಡ್ಡರ ಮೃತಪಟ್ಟಿದ್ದಾರೆ. ಇತರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು , ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮಗು ಅಪಾಯದಿಂದ ಪಾರಾಗಿದ್ದು , ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin