ತುಂಬಿದ ಜಲಾಶಯಗಳಿಗೆ ಸಂಸದ ಧೃವನಾರಾಯಣ್ ರಿಂದ ಬಾಗಿನ

ಈ ಸುದ್ದಿಯನ್ನು ಶೇರ್ ಮಾಡಿ

hanuru
ಹನೂರು, ಅ.17- ಕ್ಷೇತ್ರ ವ್ಯಾಪ್ತಿ ಅಜ್ಜೀಪುರ ಸಮೀಪ ಉಡುತೊರೆ ಜಲಾಶಯ ಹಾಗೂ ಹೂಗ್ಯಂ ಜಲಾಶಯಗಳು ಭರ್ತಿಯಾದ ಹಿನ್ನೆಲೆ ಸಂಸದ ಆರ್. ಧೃವನಾರಾಯಣ್, ಶಾಸಕ ಆರ್.ನರೇಂದ್ರ ಮತ್ತು ಚಾ.ನಗರ ಜಿ.ಪಂ. ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಬಸವರಾಜು ಬಾಗೀನ ಅರ್ಪಿಸಿದರು. ಈ ವೇಳೆ ಸಂಸದ ಆರ್. ಧೃವನಾರಾಯಣ್ ಮಾತನಾಡಿ, ಸತತ ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ತೀರಾ ಬರಗಾಲದಿಂದ ಕಂಗೇಟ್ಟಿದ್ದ ರೈತಾಪಿ ವರ್ಗಕ್ಕೆ ಈ ಭಾರಿ ಉತ್ತಮ ಮಳೆಯಿಂದಾಗಿ ಮಂದಹಾಸ ಮೂಡಿದೆ. ಗುಂಡಾಲ್ ಜಲಾಶಯ ಹೊರತು ಪಡಿಸಿ, ಗೋಪಿನಾಥಂ, ಹುಬ್ಬೇಹುಣಸೆ, ರಾಮಗುಡ್ಡೆ, ಉಡುತೊರೆ, ಹೂಗ್ಯಂ, ನೇತ್ರಾವತಿ, ಕೌಳ್ಳಿಹಳ್ಳ ಡ್ಯಾಂ ತುಂಬಿದ್ದು ಈ ವರ್ಷದ ಬೆಳೆ ಮತ್ತು ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ ಎಂದರು.

ಉಡುತೊರೆ ಜಲಾಶಯವು 6217 ಹೆಕ್ಟರ್ ಪ್ರದೇಶ ಹೊಂದಿರುತ್ತದೆ. ಲೊಕ್ಕನಹಳ್ಳಿ, ಒಡೆಯರ್ ಪಾಳ್ಯ ಭಾಗದ ದಟ್ಟಾರಣ್ಯ ಪ್ರದೇಶ ಹೊಂದಿದ್ದು, ಒಂದು ತಿಂಗಳಿಂದ ಹೇರಳವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಡುತೊರೆ ಜಲಾಶಯ ಭರ್ತಿಯಾಗಿರುತ್ತದೆ. ಮತ್ತು ಎಡ ಮತ್ತು ಬಲದಂಡ ನಾಲೆಗಳ ಕಾಮಾಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ಜಿ.ಪಂ.ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಬಸವರಾಜು, ಜಿ.ಪಂ.ಸದಸ್ಯ ಶಿವಮ್ಮ, ಮರುಗದಮಣಿ, ಲೇಖಾರವಿ ತಾ.ಪಂ. ಅಧ್ಯಕ್ಷ ರಾಜು ಮಂಗಲ ಪುಟ್ಟರಾಜು ಸಾಯಿ ಸಮಿತಿ ಅಧ್ಯಕ್ಷ ಬಂಡಳ್ಳಿ ಜಾವೇಧ್ ಅಹಮ್ಮದ್, ಮಾಜಿ ತಾ.ಪಂ. ಅಧ್ಯಕ್ಷ ಮುರುಳಿ, ಮುಖಂಡರಾದ ಕೃಷ್ಣ, ರವಿ ಕುಮಾರ್,ನಾಗರಾಜು, ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin