ಬೈಕ್ ಸವಾರನ ತಲೆ ಮೇಲೆ ಹರಿದ ತಮಿಳುನಾಡಿನ ಸರ್ಕಾರಿ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

accident
ಬೆಂಗಳೂರು,ನ.13-ತಮಿಳುನಾಡು ಸರ್ಕಾರಿ ಬಸ್ಸೊಂದು ಹಿಂಬದಿಯಿಂದ ಬೈಕ್‍ಗೆ ಡಿಕ್ಕಿ ಹೊಡೆದು ಅದರ ಮೇಲಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸೂರುರಸ್ತೆ ಚಿಕ್ಕತೇಗೂರು ಗೇಟ್ ಬಳಿ ಇಂದು ಮುಂಜಾನೆ ನಡೆದಿದೆ. ಬನಶಂಕರಿಯ ಭವಾನಿನಗರ ನಿವಾಸಿ ಪುಟ್ಟರಾಜು(25) ಮೃತಪಟ್ಟ ಯುವಕ.  ಇಂದು ಬೆಳಗ್ಗೆ ಪುಟ್ಟರಾಜು ಬೈಕ್‍ನಲ್ಲಿ ತನ್ನ ಸಂಬಂಧಿಕರ ಮನೆಯಿಂದ ವಾಪಸ್ಸಾಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪುಟ್ಟರಾಜು ಕೆಳಗೆ ಬಿದ್ದಿದ್ದು , ಕೆಳಗೆ ಬಿದ್ದ ಅವನ ತಲೆ ಮೇಲೆ ಬಸ್ ಹರಿದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಅಪಘಾತದ ಬಳಿಕ ಚಾಲಕ ಬಸ್ ನಿಲ್ಲಿಸದೆ ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಮತ್ತೊಬ್ಬ ಬೈಕ್ ಸವಾರ ರಾಜೇಶ್ ಎಂಬ ಯುವಕ ತನ್ನ ಬೈಕ್ ಮೇಲೆ ಬಸ್ ಚೇಸ್ ಮಾಡಿ ಚಾಲಕನನ್ನು ಹಿಡಿದಿದ್ದಾನೆ. ರಾಜೇಶ್ ಮಡಿವಾಳದವರೆಗೂ ಹಿಂಬಾಲಿಸಿ ಅಪಘಾತವೆಸಗಿದ ಚಾಲಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಚಾಲಕನನ್ನು ಬಂಧಿಸಿ ಬಸ್ ವಶಪಡಿಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ. ಮೃತ ಯುವಕನನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್‍ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin