ದಂಪತಿ ಕಲಹಕ್ಕೆ 30 ಜನರ ತಂಡ ಮನೆಗೆ ನುಗ್ಗಿ ಸೋದರನನ್ನು ಕೊಚ್ಚಿ ಕೊಂದರು..!

ಈ ಸುದ್ದಿಯನ್ನು ಶೇರ್ ಮಾಡಿ

Murder-02

ಗದಗ, ನ.12-ದಂಪತಿ ನಡುವಿನ ಕಲಹಕ್ಕೆ ನಡೆದ ಮಾರಣ ಹೋಮದಲ್ಲಿ ಸೋದರನೇ ಬಲಿಯಾಗಿರುವ ಪೈಶಾಚಿಕ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬೆಳ್ಳಗಟ್ಟಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 30 ಜನರ ತಂಡ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಒಬ್ಬನನ್ನು ಕೊಚ್ಚಿ ಕೊಲೆ ಮಾಡಿ, ಐವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಣ್ಣಪ್ಪ ಹೊನ್ನಣ್ಣನವರ್(32) ಕೊಲೆಯಾದ ದುರ್ದೈವಿ.

ಘಟನೆಯಲ್ಲಿ ಸಣ್ಣಪ್ಪನ ಸಂಬಂಧಿಕರಾದ ಅಡಿವಪ್ಪ , ಚಂದ್ರಕಾಂತ್, ಹನುಮವ್ವ, ರಂಗಪ್ಪ , ವೆಂಕಪ್ಪ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಐವರನ್ನೂ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಭಾಷ್ ಮತ್ತು ರೇಣುಕಾ ದಂಪತಿ ನಡುವೆ ನಡೆದ ಕಲಹ ಸಂಬಂಧ ರೇಣುಕಾ ಸಹೋದರ ಸಣ್ಣಪ್ಪ ಹೊನ್ನಣ್ಣನವರ್ ಬಲಿಯಾಗಿದ್ದಾನೆ ಎಂದು ಹೇಳಲಾಗಿದೆ.

ನಿನ್ನೆ ತಡರಾತ್ರಿ ಮನೆಗೆ ನುಗ್ಗಿದ ಸುಭಾಷ್ ಬಂಡಿ ಅಂಡ್ ಗ್ಯಾಂಗ್ ಮಲಗಿದ್ದ ಸಣ್ಣಪ್ಪ ಹೊನ್ನಣ್ಣನವರ್ ಮೇಲೆ ಹಲ್ಲೆ ಮಾಡಿದೆ. ಎಚ್ಚರಗೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಈತನನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ತಡೆಯಲು ಬಂದ ಐವರನ್ನು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.  ಮಧ್ಯರಾತ್ರಿ ಸಿನಿಮೀಯ ರೀತಿಯಲ್ಲಿ ಮನೆಗೆ ನುಗ್ಗಿ ಹತ್ಯೆ ಮಾಡಿದ ಘಟನೆ ನಡೆದ ಹಿನ್ನೆಲೆಯಲ್ಲಿ ಬೆಳ್ಳಿಹಟ್ಟಿ ಗ್ರಾಮ ಬೆಚ್ಚಿಬಿದ್ದಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin