ದಸರಾ ಉತ್ಸವಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ಝಗಮಗಿಸುತ್ತಿದೆ ಮೈಸೂರು

ಈ ಸುದ್ದಿಯನ್ನು ಶೇರ್ ಮಾಡಿ

Mysuru--014

ಮೈಸೂರು,ಸೆ.20-ಜಗದ್ವಿಖ್ಯಾತ ನಾಡಹಬ್ಬ ದಸರಾ ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. 10 ದಿನಗಳ ಕಾಲ ನಡೆಯುವ ದಸರಾ ಉತ್ಸವಕ್ಕೆ ನಾಳೆ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ನಾಡ ಅದಿದೇವತಗೆ ಚಾಮುಂಡೇಶ್ವರಿಗೆ 8.45ಕ್ಕೆ ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿಗೆ ಚಾಲನೆ ನೀಡಲಾಗುವುದು. ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅವರು ಚಾಮುಂಡಿ ಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ, ಜಿಲ್ಲಾ ಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ , ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಮತ್ತಿತರರ ಗಣ್ಯರು ಆಗಮಿಸಲಿದ್ದಾರೆ.

Mysuru--017

ಪೊಲೀಸ್ ಸಹಾಯವಾಣಿ, ಕಲಾ ಪ್ರದರ್ಶನದ ಶಿಬಿರಗಳು, ಕ್ರೀಡಾ ಜ್ಯೋತಿ, ಮಹಿಳಾ ಸಂಘಟನೆಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮಾರಾಟ ಮೇಳ. ಕಲಾ ಮಂದಿರದಲ್ಲಿ ನಡೆಯಲಿರುವ ಚಲನಚಿತ್ರೋತ್ಸವ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಆರಂಂವಾಗಲಿರುವ ಆಹಾರ ಮೇಳೆ, ದೇವರಾಜ ಅರಸು ವಿವಿದ್ದೋಶ ಕ್ರೀಡಾಂಗಣದಲ್ಲಿ ನಡೆಯಲಿರುವ ದಸರಾ ಕುಸ್ತಿ ಪಂದ್ಯವಳಿ, ದಸರ ವಸ್ತು ಪ್ರದರ್ಶನ, ದಸರಾ ಸಾಂಸ್ಕøತಿಕ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ನಾಳೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ದಸರಾ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ದೇಶದ ವಿವಿಧ ಪ್ರವಾಸಿಗರು ಆಗಮಿಸಲಿದ್ದಾರೆ. ನವರಾತ್ರಿ ಎಂತಲೂ ಕರೆಯುವ ದಸರಾ ಹಬ್ಬವು ದೇಶಾದ್ಯಂತ ಆಚರಿಸುವ ಸಡಗರದ ಹಬ್ಬ. ಹತ್ತು ದಿನಗಳ ವಿಜೃಂಭಣೆಯಿಂ ವಿಜಯದಶಮಿ ಐತಿಹಾಸಿಕ ಜಂಬು ಸವಾರಿಯೊಂದಿಗೆ ಉತ್ಸವಕ್ಕೆ ತೆರೆ ಬೀಳುತ್ತದೆ. ಸಾಂಸ್ಕøತಿಕವಾಗಿ, ಸಾಮಾಜಿಕವಾಗಿ ಅತ್ಯಂತ ವೇಗವಾಗಿ ಬೆಳೆದ ಪ್ರಾಂತ್ಯ ಮೈಸೂರು ರಾಜ್ಯ, ವಿಜಯನಗರ ಅರಸರ ಕಾಲದ ದಸರಾ ಆಚರಣೆಯನ್ನು ಮೈಸೂರು ಅರಸರು ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದಾರೆ.

Mysuru--015

ದಸರಾ ಉತ್ಸವ ಹತ್ತು ದಿನಗಳ ಸುದೀರ್ಘ ಹಬ್ಬ. ಈ ಹಬ್ಬವನ್ನು ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ವಿಜಯ ದಿನದ ಸಂಕೇತವಾಗಿ ಆಚರಿಸಿಕೊಂಡು ಬದಲಾಗುತ್ತದೆ.  ದಸರಾ ದಿನಗಳಂದು ಅರಮನೆಯ ದರ್ಬಾರ್ ಹಾಲ್‍ನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಿಜಯದಶಮಿಯಂದು ತಾಯಿ ಚಾಮುಂಡಿ ದೇವಿಯನ್ನು ಹೊತ್ತ ಅರ್ಜುನ ಇತರ 10-12 ಆನೆಗಳೊಂದಿಗೆ ವಿವಿಧ ಜಾನಪದ ಕಲಾತಂಡಗಳು, ನಾಡಿನ ಸಂಸ್ಕøತಿ, ಅಭಿವೃದ್ಧಿ ಸಂಕೇತಿಸುವ ಸ್ತಬ್ಧಚಿತ್ರಗಳು, ವಾದಮೃದಂಗಗಳು, ಪೊಲೀಸ್ ಹಾಗೂ ಸೈನಿಕ ದಳದೊಂದಿಗೆ ನಗರದ ರಾಜಬೀದಿಗಳಲ್ಲಿ ನಡೆಯುವುದನ್ನು ನೋಡಿದರೆ ಹಿಂದಿನ ಗತವೈಭವ ಕಣ್ಣ ಮುಂದೆ ಪ್ರತ್ಯಕ್ಷವಾಗುತ್ತದೆ.

Mysuru--02

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin