ದೇವಸ್ಥಾನಕ್ಕೆ ತೆರಳುತ್ತಿದ್ದ ದಂಪತಿಗೆ ಲಾರಿ ಡಿಕ್ಕಿ : ಪತ್ನಿ ಎದುರೇ ಪತಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

bagal-1
ಬಾಗಲಕೋಟೆ, ಡಿ.5- ಬೈಕ್‍ನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ದಂಪತಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಹುನಗುಂದ ತಾಲ್ಲೂಕಿನ ಚಿಕ್ಕಕೊಡಗಲಿ ಗ್ರಾಮದ ಬಳಿ ನಡೆದಿದೆ. ಇಳಕಲ್‍ನ ನಿವಾಸಿಯಾದ ಯಮನೂರು (28) ಮೃತ ದುರ್ದೈವಿಯಾಗಿದ್ದು, ಪತ್ನಿ ತನುಜಾ (22) ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು 5 ಗಂಟೆ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬೈಕ್‍ನಲ್ಲಿ ಚಲಿಸುವಾಗ ಏಕಾಏಕಿ ಲಾರಿ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ. ರಸ್ತೆ ಪಕ್ಕ ಬಿದ್ದ ದಂಪತಿ ನೆರವಿಗೆ ಯಾರು ಬರಲಿಲ್ಲ ಎನ್ನಲಾಗಿದೆ. ನೋಡು ನೋಡುತ್ತಿದ್ದಂತೆಯೇ ಪತ್ನಿ ಎದುರೇ ಪತಿ ಯಮನಪ್ಪ ಪ್ರಾಣ ಬಿಟ್ಟಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಳಕಲ್ ಠಾಣೆ ಪೊಲೀಸರು ತನುಜಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಪಘಾತವೆಸಗಿ ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin