ನಡೆದುಕೊಂಡೆ ವಿಂಧ್ಯಗಿರಿ ಬೆಟ್ಡವೇರಿ ಸಿಎಂ ಸಿದ್ದರಾಮಯ್ಯ ಸುಸ್ತೋ ಸುಸ್ತು..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-03

ಶ್ರವಣಬೆಳಗೊಳ. ಫೆ.17 : ಶ್ರವಣಬೆಳಗೊಳದ ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಇದಕ್ಕೂ ಮೊದಲು ವಿಂಧ್ಯಗಿರಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಸ್ತಾಗಿ ಹೋಗಿದ್ದರು.  ವಿದ್ಯಾಂಗಿರಿಯ ಗಣ್ಯರ ಮುಖ್ಯ ದ್ವಾರಕ್ಕೆ ಆಗಮಿಸಿದ ಸಿಎಂಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಡೋಲಿಯನ್ನು ಸಿದ್ದಪಡಿಸಿದ್ದರು. ಬೆಟ್ಟ ಹತ್ತುವ ಮೊದಲು ಪೊಲೀಸರಿಂದ ಮಾಹಿತಿ ಪಡೆದ ಸಿಎಂ ‘ಏನ್ರೀ ಡೋಲಿ ಚೆನ್ನಾಗಿದ್ಯಾ..ಅದರಲ್ಲಿ ಕುಳಿತು ಬೆಟ್ಟಕ್ಕೆ ಹೋಗಬಹುದಾ..? ಡೋಲಿ ಹೊರುವವರು ಸರಿಯಾಗಿದ್ದಾರಾ..? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ‘ಹೌದು ಸರ್ ಡೋಲಿ‌ ಸರಿಯಾಗಿದೆ.. ನಾವು ಎಲ್ಲವನ್ನು ಚೆಕ್ ಮಾಡಿದ್ದೇವೆ.. ನೀವು ಅರಾಮಾಗಿ ಡೋಲಿಯಲ್ಲಿ ಹೋಗಬಹುದು ಎಂದರು. ಆದರೆ ಡೋಲಿಯನ್ನು ನಯವಾಗಿಯೇ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ ‘ಬೇಡಪ್ಪಾ.. ನಾನು‌ ನಡೆದುಕೊಂಡೆ ಬೆಟ್ಟ ಹತ್ತುತ್ತೀನಿ’ ಎಂದು ನಡೆದುಕೊಂಡೇ ವಿದ್ಯಾಂಗಿರಿ ಬೆಟ್ಟ ಏರಿದರು.

Siddaramaiah-04

ತದನಂತರ ಬಾಹುಬಲಿ ಸ್ವಾಮಿಗೆ ಅಭಿಷೇಕ ನೆರವೇರಿಸಿ ಮಾತನಾಡಿದ ಅವರು, ಬೆಟ್ಟ ಹತ್ತೋಕೆ ಆಗಲ್ಲ ಅಂದು ಕೊಂಡಿದ್ದೆ, ಆದ್ರೂ ಕೂಡ ಬೆಟ್ಟ ಹತ್ತಿದ್ದೇನೆ, ಶಾಂತಿ ಸಾರುವ ಗೊಮ್ಮಟ್ಢೇಶ್ವರನ ಬೆಟ್ಟದಲ್ಲಿ ಡೋಲಿ ಮೇಲೆ ಕೂತು ಹಿಂಸೆ ಯಾಕೆ ಮಾಡೋದು ಅಂತಾ ಬೆಟ್ಟವನ್ನು ನಡೆದುಕೊಂಡೇ ಹತ್ತಿದ್ದೇನೆ’, 2000ನೇ ಇಸವಿಯಲ್ಲಿ‌ ಹೃದಯಕ್ಕೆ ನಾನು ಸ್ಡಂಟ್ ಹಾಕಿಸಿಕೊಂಡಿದ್ದೇನೆ. ಅದಕ್ಕೆ ಅದಿಕ್ಕೆ‌ ರಿಸ್ಕ್‌ ಬೇಡ ಎಂದು ನಾನು ನಡೆದುಕೊಂಡೆ‌ ಬೆಟ್ಡವೇರಿದೆ ಎಂದರು.

Siddaramaiah

ನಾನು‌ ಮೊದಲ‌ ಸಾರಿ ಇಲ್ಲಿಗೆ ಬಂದಿದ್ದೇನೆ. ಧರ್ಮಸಿಂಗ್ ಸಿಎಂ ಆಗಿದ್ದಾಗ ನಾನು ಡಿಸಿಎಂ ಆಗಿದ್ದೆ. ಜೊತೆಗೆ ಹಣಕಾಸು ಸಚಿವನೂ ಆಗಿದ್ದೆ, ಆಗ ನಾನೇ ಮೊದಲು ಬಜೆಟ್ ನಲ್ಲಿ ಮಹಾ ಮಸ್ತಕಾಭಿಷೇಕಕ್ಕೆ ಹಣ ಕೊಟ್ಡಿದ್ದೆ. ಆದರೆ ಧರ್ಮಸಿಂಗ್ ದೇವೇಗೌಡರ ಮಾತು ಕೇಳಿಕೊಂಡು ನನ್ನನ್ನು ವಜಾ ಮಾಡಿದ್ರು. ಮಸ್ತಕಾಭಿಷೇಕ ನಡೆಯುವ ವೇಳೆಗೆ ನಾನು ಡಿಸಿಎಂ, ಹಣಕಾಸು ಸಚಿವ ಸ್ಥಾನ ಎರಡನ್ನೂ ಕಳೆದುಕೊಂಡಿದ್ದೆ.   ಈಗ ಮುಖ್ಯಮಂತ್ರಿಯಾಗಿದ್ದೇನೆ, ರಾಜ್ಯದ ಜನರಿಗೆ ಒಳ್ಳೆಯದಲಾಗಲಿ ಅಂತಾ ಕೇಳಿಕೊಂಡಿದ್ದೇನೆ. ಈ ಸಾರಿ ಮಹಾಮಸ್ತಕಾಭಿಷೇಕವನ್ನು ಚೆನ್ನಾಗಿ ಮಾಡಬೇಕು ಅಂತಾ ಅಧಿಕಾರಿಗಳಿಗೆ ಕಠಿಣ ಸೂಚನೆ ಕೊಟ್ಟಿದ್ದೇನೆ ಎಂದರು.

ಬೆಟ್ಟ ದಿಂದ ಇಳಿದು ಸ್ವಲ್ವ ಹೊತ್ತ ವಿಶ್ರಾಂತಿ ‌ಪಡೆದ‌ ಸಿಎಂ, ಟೆಂಟ್ ಕೆಳಗೆ ಕುಳಿತು ವಿಶ್ರಾಂತಿ ‌ಪಡೆದು, ಬಳಿಕ ಕಾರಿನಲ್ಲಿ ಕುಳಿತು ವಿಶ್ರಾಂತಿ ‌ಪಡೆದರು. ಕಾರಲ್ಲೇ ಕುಳಿತು ಟೀ‌ ಕುಡಿದರು. ಬಳಿಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin