ನವಜಾತ ಶಿಶುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿ ಹೋದ ಕಲ್ಲು ಹೃದಯದ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Baby--02ಬಾಗಲಕೋಟೆ,ಅ.15- ಆಗ ತಾನೆ ಜನಿಸಿದ ಮಗುವನ್ನು ಅದ್ಯಾವ ನಿರ್ಧಯಿ ತಾಯಿ ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯ ಹಳ್ಳೂರು ಗ್ರಾಮದಲ್ಲಿ ನಡೆದಿದೆ. ಹೆಣ್ಣು ಮಗುವೆಂದು ಬಿಟ್ಟು ಹೋಗಿರಬಹುದು ಅಥವಾ ಅನೈತಿಕ ಸಂಬಂಧದಲ್ಲಿ ಜನಿಸಿದ ಮಗುವಿರಬಹುದೋ ತಿಳಿಯದು.

ಬೆಳಗ್ಗೆ ಭಗವತಿ -ಹಳ್ಳೂರು ಮಧ್ಯೆ ಹಳ್ಳದಲ್ಲಿ ಮಗು ಅಳುತ್ತಿರುವುದನ್ನು ಕೇಳಿ ಗ್ರಾಮಸ್ಥರು ಹೋಗಿ ನೋಡಿದ್ದಾರೆ. ತಕ್ಷಣ ಅಂಗನವಾಡಿಯವರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಕಾರ್ಯಕರ್ತೆಯರು ಮಗುವನ್ನು ಸಲಹಿ ಬೇವೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದ್ಯಾವ ಮಹಾತಾಯಿ ಮಗುವನ್ನು ಹೆತ್ತಿದ್ದಾಳೋ, ಕರುಣೆಯಿಲ್ಲದೆ ತನ್ನ ಕುಡಿಯನ್ನೇ ಬಿಸಾಡಿ ಹೋಗಿದ್ದಾಳಲ್ಲ ಎಂದು ಸ್ಥಳೀಯರು ಶಾಪ ಹಾಕುತ್ತಿದ್ದುದ್ದು ಕಂಡು ಬಂದಿತು. ವಿಷಯವನ್ನು ಪೊಲೀಸರಿಗೆ ತಿಳಿಸುವುದಾಗಿ ಆರೋಗ್ಯ ಕೇಂದ್ರದವರು ಹೇಳಿದ್ದಾರೆ. ಸಧ್ಯ ಮಗು ಚೇತರಿಸಿಕೊಳ್ಳುತ್ತಿದೆ.

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin