ನಾಗ್ಪುರದಲ್ಲಿ ನಾಳೆ 2ನೇ ಟಿ-20 ಪಂದ್ಯ : ಒತ್ತಡದಲ್ಲಿ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

nagpur
ನಾಗ್ಪುರ್, ಜ.28- ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ದದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸೋಲುವ ಮೂಲಕ ಕಳೆದ 15 ತಿಂಗಳಲ್ಲಿ ತವರು ನೆಲದಲ್ಲಿ ಮೊದಲ ಸೋಲು ಇದಾಗಿದ್ದು , ಕೊಹ್ಲಿ ನಾಯಕತ್ವದ ಭಾರತ ತಂಡ ಹೊಸ ಹುಮ್ಮಸ್ಸು, ಹುರುಪಿನಿಂದ ಆಡುವ ಮೂಲಕ ನಾಳೆ ನಾಗ್ಪುರದಲ್ಲಿ ನಡೆಯಲಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.   2015 ಅಕ್ಟೋಬರ್‍ನಲ್ಲಿ ನಡೆದ ದಕ್ಷಿಣ ಆಪ್ರಿಕಾದ ವಿರುದ್ಧದ ಟಿ-20 ಸರಣಿಯಲ್ಲಿ ಭಾರತ 2-3 ಅಂತರದಲ್ಲಿ ಸೋಲುಂಡಿತ್ತು. ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಗೆಲುವಿನ ನಾಗಲೋಟದಲ್ಲಿ ಮುನ್ನುಗುತ್ತಿದ್ದ ಕೊಹ್ಲಿ ನಾಯಕತ್ವದ ಭಾರತ ಮುಗ್ಗರಿಸಿದೆ.   ನಾಳೆ ನಡೆಯಲಿರುವ ಚುಟುಕು ಕ್ರಿಕೆಟ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕೊಹ್ಲಿ ಪಡೆ ಸಿಲುಕಿದೆ.

ಮೊದಲ ಪಂದ್ಯದಲ್ಲಿ ಎಡವಿದ್ದ ಕೆ.ಎಲ್.ರಾಹುಲ್, ಕೊಹ್ಲಿ, ಸುರೇಶ್ ರೈನಾ ನಾಳಿನ ಪಂದ್ಯದಲ್ಲಿ ಬ್ಯಾಟಿಂಗ್‍ನಲ್ಲಿ ಲಯ ಕಂಡುಕೊಂಡರೆ ಗೆಲ್ಲುವುದು ಕಟ್ಟಿಟ್ಟ ಬುತ್ತಿ. ಕಳೆದ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಲೆಗ್ ಸ್ಪಿನರ್ ಯುಜ್ವೇಂದರ್ ಚಹಲ್ ಅವರಿಂದ ದ್ವಿತೀಯ ಪಂದ್ಯದಲ್ಲಿ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin