ನೀವು ಅಪರೂಪದ ಬಿಳಿ ಮೊಸಳೆ ನೋಡಿದ್ದೀರಾ..?

ಈ ಸುದ್ದಿಯನ್ನು ಶೇರ್ ಮಾಡಿ

crocodile

ನೀವೇನೇ ಹೇಳಿ.. ಶ್ವೇತ ವರ್ಣದ ಜೀವಿಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಬಿಳಿ ಹುಲಿ, ಬಿಳಿ ಸಿಂಹ, ಬಿಳಿ ಜಿಂಕೆ, ಬಿಳಿ ನವಿಲು, ಬಿಳಿ ಕಾಗೆ.. ಇತ್ಯಾದಿ ಪ್ರಾಣಿಪಕ್ಷಿಗಳು ತಮ್ಮ ಅಸ್ವಾಭಾವಿಕ ಬಣ್ಣದಿಂದ ಸುದ್ದಿಯಾಗುತ್ತವೆ. ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಶ್ವೇತ ವರ್ಣದ ಮೊಸಳೆ…! ಆಸ್ಟ್ರೇಲಿಯಾ ಉತ್ತರ ಭಾಗದಲ್ಲಿ ಕಳೆದ ವಾರ ಅಪರೂಪದ ದೃಶ್ಯವೊಂದನ್ನು ಕಂಡು ಪ್ರವಾಸಿಗರು ಚಕಿತರಾದರು. ಅಡಿಲೇಡ್ ನದಿಯಲ್ಲಿ ಮೊಸಳೆ ವೀಕ್ಷಣೆಗಾಗಿ ದೋಣಿಯಲ್ಲಿ ಸಾಗುತ್ತಿದ್ದ ಮಂದಿಗೆ ಶ್ವೇತ ಮೊಸಳೆಯೊಂದು ಕಾಣಿಸಿಕೊಂಡಿತು. ಅತ್ಯಂತ ಅಪರೂಪವಾದ ಪರ್ಲ್ ಎಂದು ಕರೆಯಲ್ಪಡುವ ಈ ಬಿಳಿ ಮಕರ ಪ್ರವಾಸಿಗರಿಗೆ ಪ್ರತ್ಯಕ್ಷವಾದಾಗ ಅವರು ತಮ್ಮ ಕಣ್ಣುಗಳನ್ನು ತಾವೇ ನಂಬದಾದರು.

crocodile-2

ವನ್ಯಜೀವಿ ಮಾರ್ಗದರ್ಶಿ ಮೈಕ್ ಕೀಗ್ಲೆ ಅವರಿಗೆ ಈ ಮೊಸಳೆ ಮೊದಲ ಬಾರಿಗ ಕಣ್ಣಿಗೆ ಬಿತ್ತು. ಅವರು ಹೇಳುವಂತೆ ಹೈಪೋಮೆಲಾನಿಸಂ ಎಂಬ ಚರ್ಮ ದೋಷದಿಂದ ಮೊಸಳೆಗೆ ಈ ಬಿಳಿ ಬಣ್ಣ ಬಂದಿದೆ. ವೈಟ್ ಪರ್ಲ್ ಮೊಸಳೆ ತೊನ್ನು ಅಥವಾ ಹಾಲ್ಚರ್ಮ ರೋಗದಿಂದ ಬಳಲುತ್ತಿಲ್ಲ. ಆದರೆ ಇದರ ಬಿಳಿ ಬಣ್ಣವೇ ಈ ಮೊಸಳೆಗೆ ತೊಂದರೆಯನ್ನು ಉಂಟು ಮಾಡಿದೆ. ಇತರ ಮೊಸಳೆಗಳಿಂದ ಪರಿತ್ಯಕ್ತ ವಾಗಿರುವ ಇದು ಅಪಾಯ ದಲ್ಲಿದೆ ಎನ್ನುತ್ತಾರೆ ಮೈಕ್.  ಆದಾಗ್ಯೂ, ಮೈಕ್ ಜೊತೆ ಮೊಸಳೆಗಳ ವೀಕ್ಷಣೆಗಾಗಿ ದೋಣಿ ವಿಹಾರದಲ್ಲಿ ತೆರಳಿದ್ದ ಪ್ರವಾಸಿಗರಂತೂ ವೈಟ್ ಪರ್ಲ್‍ನನ್ನು ನೋಡಿ ಅಚ್ಚರಿಗೊಂಡಿದ್ದಂತೂ ನಿಜ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin