ನೇಣು ಬಿಗಿದುಕೊಂಡು 8 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

hanging -suicideಮಂಡ್ಯ, ಏ.21-ಎರಡು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ನಿವಾಸಿ ಪ್ರೀತಿ (21) ಮೃತ ದುರ್ದೈವಿ. ಮೇಲುಕೋಟೆಯ ನಿವಾಸಿ ಮಂಜುನಾಥ್ ಹಾಗೂ ಪ್ರೀತಿ ನಡುವೆ ಪ್ರೇಮ ಉಂಟಾಗಿದ್ದು, ಮನೆಯವರ ವಿರೋಧದ ನಡುವೆ ಈತನ ಜತೆ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪ್ರೀತಿ ಇದೀಗ ಎರಡು ತಿಂಗಳ ಗರ್ಭಿಣಿಯಾಗಿದ್ದರು.

ಆಟೋ ಚಾಲಕನಾಗಿದ್ದ ಮಂಜುನಾಥ್ ಮೇಲುಕೋಟೆಯಲ್ಲೇ ಪ್ರೀತಿ ಜತೆ ವಾಸವಾಗಿದ್ದರು. ಇವರಿಬ್ಬರು ಅನ್ಯೋನ್ಯವಾಗಿಯೇ ಇದ್ದರೆಂದು ಹೇಳಲಾಗಿದೆ. ಈ ನಡುವೆ ಏನಾಯಿತು ಏನೋ ಮಂಜುನಾಥ್ ಹೊರಗೆ ಹೋಗಿದ್ದಾಗ ಪ್ರೀತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಪ್ರೀತಿ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಮಂಜುನಾಥ್ ವಿರುದ್ಧ ದೂರು ನೀಡಿ ಮಗಳ ಸಾವಿಗೆ ಆತನೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದ ಮೇಲುಕೋಟೆ ಸರ್ಕಲ್ ಇನ್ಸ್‍ಪೆಕ್ಟರ್ ಶಂಕರಾಚಾರ್ಯ, ಸಬ್ ಇನ್ಸ್‍ಪೆಕ್ಟರ್ ಸೋಮೇಗೌಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಶವವನ್ನು ಮೇಲುಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin