ನೋಟು ಅಮಾನ್ಯೀಕರಣದಿಂದ ಸತ್ಪರಿಣಾಮ ಪ್ರಯೋಜನಗಳಾಗಿವೆ : ಐಎಂಎಫ್

ಈ ಸುದ್ದಿಯನ್ನು ಶೇರ್ ಮಾಡಿ

IMF--02

ವಾಷಿಂಗ್ಟನ್, ಡಿ.15-ಕಳೆದ ವರ್ಷ ನವೆಂಬರ್‍ನಿಂದ ಭಾರತದಲ್ಲಿ ಜಾರಿಗೆ ಬಂದಿರುವ ನೋಟು ಅಮಾನ್ಯೀಕರಣದಿಂದ ಮಧ್ಯಮ-ಅವಧಿಯಲ್ಲಿ ಪ್ರಯೋಜನಗಳು ಕಂಡುಬಂದಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ನೋಟು ಅಮಾನ್ಯೀಕರಣದಿಂದ ಸತ್ಪರಿಣಾಮ ಪ್ರಯೋಜನಗಳು ಕಂಡುಬಂದಿವೆ ಹಾಗೂ ಮತ್ತಷ್ಟು ಅನುಕೂಲಗಳು ಮುಂದಿನ ದಿನಗಳಲ್ಲಿ ಗೋಚರಿಸಲಿವೆ ಎಂದು ಐಎಂಎಫ್ ಉನ್ನತಾಧಿಕಾರಿ ವಿಲಿಯಮ್ ಮುರ್ರೆ ನಿನ್ನೆ ರಾತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೋಟು ರದ್ದತಿ ನಿರ್ಧಾರದಿಂದ ಆರಂಭದಲ್ಲಿ ನಗದು ಅಭಾವದಿಂದಾಗಿ ಆರ್ಥಿಕ ಚಟುವಟಿಕೆ, ಪ್ರಾಥಮಿಕ, ಖಾಸಗಿ ಬಳಕೆ ಹಾಗೂ ಸಣ್ಣಪುಟ್ಟ ವ್ಯಾಪಾರ ವ್ಯವಹಾರಗಳಲ್ಲಿ ತಾತ್ಕಾಲಿಕ ಅಡಚಣೆಗಳು ಕಂಡುಬರುವುದು ಸಹಜ. ಆದರೆ ದೀರ್ಘಾವಧಿಗೆ ಇದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಅವರು ವಿಶ್ಲೇಷಣೆ ಮಾಡಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin