ಪಾಕ್‍ನ ಪ್ರತಿ ಬುಲೆಟ್‍ಗೆ ಬಾಂಬ್‍ನಿಂದ ಉತ್ತರಿಸಬೇಕು : ಅಮಿತ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01
ನವದೆಹಲಿ, ಮಾ.25-ಪಾಕಿಸ್ತಾನದ ಪ್ರತಿ ಬುಲೆಟ್‍ಗೆ ಬಾಂಬ್‍ನಿಂದಲೇ ಉತ್ತರಿಸುವುದರಿಂದ ಮಾತ್ರ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಒಳನುಸುಳುವಿಕೆಗೆ ಪರಿಹಾರ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಪಾಕಿಸ್ತಾನದಿಂದ ಬರುವ ಪ್ರತಿ ಬುಲೆಟ್‍ಗೆ ಭಾರತದ ಸಶಸ್ತ್ರ ಪಡೆಗಳು ಬಾಂಬ್‍ನಿಂದಲೇ ಪ್ರತಿಕ್ರಿಯಿಸಬೇಕು. ಆಗ ಮಾತ್ರ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಗಡಿಯೊಳಗೆ ಅತಿಕ್ರಮಣ ಪ್ರಕರಣಗಳು ಸಂಪೂರ್ಣ ಹತೋಟಿಗೆ ಬರುತ್ತವೆ ಎಂದು ಅವರು ಸುದ್ಧಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ಭಾರತದ ಕಮ್ಯಾಂಡೊಗಳು ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಭಯೋತ್ಪಾದಕರನ್ನು ಸದೆಬಡಿದರೂ, ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಉಗ್ರಗಾಮಿ ದೇಶದೊಳಗೆ ಈಗಲೂ ನುಸುಳಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ನಾವು ಬುಲೆಟ್‍ಗಳು ಮತ್ತು ಬಾಂಬ್‍ಗಳಿಂದ ಆ ರಾಷ್ಟ್ರಕ್ಕೆ ಉತ್ತರ ನೀಡಬೇಕೇ ಹೊರತು, ಅದರೊಂದಿಗೆ ಶಾಂತಿ ಮಾತುಕತೆ ನಡೆಸಕೂಡದು ಎಂದು ಪ್ರತಿಕ್ರಿಯಿಸಿದರು. ನಮ್ಮ ಸೇನಾ ಬಲ ಅತ್ಯಂತ ಸಮರ್ಥವಾಗಿದ್ದು, ವೈರಿ ದಾಳಿಯನ್ನು ಹಿಮ್ಮೆಟ್ಟಿಸುವ ಅಗಾಧ ಬಲ ಹೊಂದಿದೆ ಎಂದು ಅವರು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin