ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯಗೊಸುವುದೇಕೆ..? : ಕೇಂದ್ರಕ್ಕೆ ಸುಪ್ರೀಂ ಪ್ರೆಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Suprem-Court

ನವದೆಹಲಿ, ಏ.21-ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಕಾರ್ಡ್ ಹೊಂದಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ಇಂದು ಪ್ರಶ್ನಿಸಿದೆ.   ನ್ಯಾಯಮೂರ್ತಿ ಎಸ್.ಕೆ.ಸುಕ್ರಿ ನೇತೃತ್ವದ ನ್ಯಾಯಪೀಠ ಪ್ಯಾನ್ ಕಾರ್ಡ್‍ಗಾಗಿ ಆಧಾರ್ ಕಾರ್ಡ್‍ನನ್ನು ಕಡ್ಡಾಯಗೊಳಿಸುವ ಔಚಿತ್ಯವೇನು ಎಂದು ಕೇಂದ್ರ ಸರ್ಕಾರವನ್ನು ಕೇಳಿತು. ಸರ್ಕಾರಿ ಅನುದಾನ-ಯೋಜನೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸ್ವತ: ಕೋರ್ಟ್ ಹೇಳಿದ್ದರೂ, ನೀವು ಅದನ್ನು ಹೇಗೆ ಕಡ್ಡಾಯಗೊಳಿಸುತ್ತೀರಿ ಎಂದೂ ಪೀಠ ಪ್ರಶ್ನಿಸಿತು.ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಿದರು. ನಕಲಿ ದಾಖಲೆಗಳನ್ನು ಬಳಸಿ ಪ್ಯಾನ್ ಕಾರ್ಡ್‍ಗಳನ್ನು ಪಡೆಯುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ ಎಂದು ಕೋರ್ಟ್ ಗಮನಕ್ಕೆ ತಂದರು.   ನಕಲಿ ಪ್ಯಾನ್ ಕಾರ್ಡ್‍ಗಳನ್ನು ಉಪಯೋಗಿಸಿ ಬೋಗಸ್ ಕಂಪನಿಗಳು ಅಕ್ರಮ ಹಣಕಾಸು ವವಾಟಿನಲ್ಲಿ ತೊಡಗುತ್ತಿರುವ ಪ್ರಕರಣಗಳಿವೆ. ಈ ನ್ನೆಲೆಯಲ್ಲಿ ಪ್ಯಾನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಅಟಾರ್ನಿ ಜನರಲ್ ಹೇಳಿದರು.

ಪ್ಯಾನ್ ಕಾರ್ಡ್ ಹೊಂದಲು ಆಧಾರ್ ಕಾರ್ಡ್ ಕಡ್ಡಾಯಗಳಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆಯೇ ಎಂದು ಪೀಠ ಪ್ರಶ್ನಿಸಿತು.   ಈ ಕುರಿತು ಮುಂದಿನ ಚಾರಣೆಯನ್ನು ನ್ಯಾಯಾಲಯ ಏ.25ಕ್ಕೆ ಮುಂದೂಡಿದೆ.   ಪ್ಯಾನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಏಕೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿರುವುದರಿಂದ ಕೇಂದ್ರ ಸರ್ಕಾರವು ಮುಂದೆ ಮೊಬೈಲ್ ಸೇವೆಗಳು, ಡ್ರೈಂಗ್ ಲೈಸನ್ಸ್ ಮತ್ತು ದೇಶೀಯ ಮಾನಯಾನಗಳಿಗೂ ಇದನ್ನು ಅನ್ವುಸುವ ಉದ್ದೇಶಕ್ಕೆ ನ್ನಡೆಯಾಗುವ ಸಾಧ್ಯತೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin